ಲಖನೌ: ಕಳೆದ ವರ್ಷ ಉತ್ತರ ಪ್ರದೇಶದ ಸಂಭಲ್ ನಗರದಲ್ಲಿ ನಡೆದ ಹಿಂಸಾಚಾರ ಘಟನೆಯ ಕುರಿತ ತನಿಖೆಗೆ ರಚನೆಯಾಗಿದ್ದ ನ್ಯಾಯಾಂಗ ಆಯೋಗವು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ವರದಿಯನ್ನು ಗುರುವಾರ ಸಲ್ಲಿಸಿದೆ.

ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟಿದ್ದರು ಮತ್ತು ಹಲವರು ಗಾಯಗೊಂಡಿದ್ದರು.

ನಗರದ ಕೋಮು ಗಲಭೆಯ ಇತಿಹಾಸ, ಸ್ವಾತಂತ್ರ್ಯಾ ನಂತರ ಜನಸಂಖ್ಯಾ ಸ್ವರೂಪದಲ್ಲಾದ ಬದಲಾವಣೆ ಮತ್ತು ಮಸೀದಿ ಇದ್ದ ಸ್ಥಳದಲ್ಲಿ ಹಿಂದೂ ದೇಗುಲ ಇತ್ತು ಎಂಬುದಕ್ಕೆ ಲಭ್ಯವಿರುವ ಸಾಕ್ಷ್ಯಗಳ ಕುರಿತ ಮಾಹಿತಿಯು 400 ಪುಟಗಳ ವರದಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

1947ರಿಂದ ಈವರೆಗೆ ಸಂಭಲ್ ನಗರದಲ್ಲಿ ಹಿಂದೂಗಳ ಜನಸಂಖ್ಯೆ ಶೇ 45ರಿಂದ ಶೇ 15ಕ್ಕೆ ಕುಸಿದಿದೆ. ಇದೇ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆಯು ಶೇ 55ರಿಂದ ಶೇ 85ಕ್ಕೆ ಹೆಚ್ಚಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಜಕೀಯ ಓಲೈಕೆ, ಯೋಜಿತ ಕೋಮು ಗಲಭೆಗಳು, ಭಯದ ವಾತಾವರಣದ ಸೃಷ್ಟಿಯೇ ಜನಸಂಖ್ಯಾ ಸ್ವರೂಪ ಮತ್ತು ಪದೇ ಪದೇ ಕೋಮು ಗಲಭೆಗಳು ನಡೆಯಲು ಕಾರಣ ಎಂದು ಸಮಿತಿಯು ವಿವರಿಸಿದೆ.

ಸಮಿತಿ ಹೇಳಿದ್ದು...

*ಮಸೀದಿ ಸಮೀಕ್ಷೆ ಕುರಿತ ಮಾಹಿತಿ ಸೋರಿಕೆಯಾಗಿತ್ತು. ಹೀಗಾಗಿ ತಂಡವು ಸಮೀಕ್ಷೆಗೆ ತೆರಳಿದ್ದಾಗ ಜನದಟ್ಟಣೆ ಉಂಟಾಗಿತ್ತು

*ಸಂಭಲ್, ಹಲವು ಭಯೋತ್ಪಾದಕ ಸಂಘಟನೆಗಳ ತಾಣ ಆಗುತ್ತಿದೆ

*ಕೋಮು ಗಲಭೆಗೆ ವಿದೇಶಿ ಶಶ್ತ್ರಾಸ್ತ್ರಗಳು ಬಳಕೆಯಾಗುತ್ತಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.