ಜೋಧ್‌ಪುರ: ವೀಸಾ ಅವಧಿ ಮುಗಿದಿದ್ದರಿಂದ ಪಾಕಿಸ್ತಾನದಲ್ಲಿ ಸಿಲುಕಿದ್ದ, ಪಾಕ್ ಮೂಲದ ಹಿಂದೂ ನಿರಾಶ್ರಿತ ಮಹಿಳೆಯೊಬ್ಬರು ಸರ್ಕಾರಗಳು ಮತ್ತು ಸಂಘಟನೆಯ ಮಧ್ಯಪ್ರವೇಶದಿಂದ ಹತ್ತು ತಿಂಗಳ ಬಳಿಕ ಭಾರತದಲ್ಲಿರುವ ತನ್ನ ಪತಿಯ ಕುಟುಂಬವನ್ನು ಸೇರಿದ್ದಾರೆ.

ಜಂತಾ ಮಾಲಿ, ಭಾರತದಲ್ಲಿನ ತಮ್ಮ ಕುಟುಂಬ ಸೇರಿಕೊಂಡ ಮಹಿಳೆ.

ಜಂತಾ ಮಾಲಿ ಭಾರತೀಯ ವ್ಯಕ್ತಿಯೊಂದಿಗೆ ವಿವಾಹವಾಗಿ, ಭಾರತದಲ್ಲೇ ವಾಸವಿದ್ದಾರೆ. ಅವರಿಗೆ ಮಕ್ಕಳೂ ಇದ್ದಾರೆ. ಆದರೆ ಅವರ ತಾಯಿ ಪಾಕಿಸ್ತಾನದಲ್ಲಿಯೇ ಇದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು ನೋಡಿಕೊಂಡು ಬರಲು ಜಂತಾ ಮಾಲಿ ಅವರು ಪತಿ, ಮಕ್ಕಳೊಂದಿಗೆ ಪಾಕಿಸ್ತಾನದ ಮಿರ್ಪುರ್ ಖಾಸ್‌ಗೆ ಫೆಬ್ರುವರಿಯಲ್ಲಿ ತೆರಳಿದ್ದರು.

ಭಾರತೀಯ ಪೌರತ್ವಕ್ಕೆ ಜಂತಾ ಮಾಲಿ ಅರ್ಜಿ ಸಲ್ಲಿಸಿದ್ದರೂ, ಅವರಿಗಿನ್ನೂ ಪೌರತ್ವ ಸಿಕ್ಕಿರಲಿಲ್ಲ. ಹೀಗಾಗಿ ಅವರು ಪಾಕಿಸ್ತಾನಕ್ಕೆ ಹೋಗಿ ಬರಲು ‘ನೊರಿ‘ (ಎನ್‌ಒಆರ್‌ಐ–‘ಭಾರತಕ್ಕೆ ಮರಳಲು ಆಕ್ಷೇಪಣೆ ಇಲ್ಲ‘) ವೀಸಾ ಪಡೆದಿದ್ದರು. ಆದರೆ ಕೋವಿಡ್ ಸಂದರ್ಭದಲ್ಲಿ ಲಾಕ್‌ಡೌನ್ ಆಗಿದ್ದರಿಂದ ಅವರ ಕುಟುಂಬ ಪಾಕ್‌ನಲ್ಲಿಯೇ ಹೆಚ್ಚು ಕಾಲ ಇರಬೇಕಾಯಿತು.

ಜೂನ್‌ನಲ್ಲಿ ಭಾರತಕ್ಕೆ ಹಿಂದಿರುಗುವ ವೇಳೆ, ಜಂತಾಮಾಲಿ ಅವರ ‘ನೊರಿ‘ ವೀಸಾ (60 ದಿನಗಳ) ಅವಧಿ ಮುಗಿದಿತ್ತು. ಹೀಗಾಗಿ ಅವರಿಗೆ ಪತಿ ಮತ್ತು ಮಕ್ಕಳೊಂದಿಗೆ ರೈಲು ಹತ್ತಲು ಅಲ್ಲಿನ ಅಧಿಕಾರಿಗಳು ಅವಕಾಶ ನೀಡಲಿಲ್ಲ.

ಕೊನೆಗೆ ಸ್ಥಳೀಯ ಸಂಘಟನೆ ಸೀಮಂತ್ ಲೋಕಸಂಸ್ಥಾನ್, ರಾಜಸ್ಥಾನ ಸರ್ಕಾರ ಮತ್ತು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ, ‘ನೊರಿ’ ವೀಸಾ ಷರತ್ತನ್ನು ವಿಸ್ತರಿಸಿ ಜಂತಾ ಮಾಲಿ ಅವರನ್ನು ವಾಪಸ್ ಭಾರತಕ್ಕೆ ಕರೆತರಲಾಯಿತು.

‘ಸತತ ಆರು ತಿಂಗಳ ಕಾಲ ಹೋರಾಟದ ನಂತರ ಗೆಲುವು ಸಿಕ್ಕಿತು‘ ಎಂದು ಸಂಘಟನೆ ಅಧ್ಯಕ್ಷ ಹಿಂದೂ ಸಿಂಗ್ ಸೋಧಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.