ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ಗೂಢಾಚಾರಿ ಮಹಿಳೆಯಿಂದ ಹನಿ ಟ್ರ್ಯಾಪ್‌: ರಕ್ಷಣಾ ಮಾಹಿತಿ ನೀಡಿದ ಯೋಧನ ಸೆರೆ

Last Updated 21 ಮೇ 2022, 13:11 IST
ಅಕ್ಷರ ಗಾತ್ರ

ಜೈಪುರ(ಪಿಟಿಐ): ಪಾಕಿಸ್ತಾನದ ಗೂಢಚಾರಿ ಮಹಿಳೆಯ ಹನಿಟ್ರ್ಯಾಪ್‌ಗೆ ಸಿಲುಕಿ ಸೇನೆಯ ರಹಸ್ಯ ಮತ್ತು ರಕ್ಷಣಾ ಮಾಹಿತಿ ಹಂಚಿಕೊಂಡ ಯೋಧನನ್ನು ಬಂಧಿಸಲಾಗಿದೆ ಎಂದು ಗುಪ್ತಚರ ವಿಭಾಗದ ಉನ್ನತ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು.

ಜೋಧ್‌ಪುರದಲ್ಲಿ ಕರ್ತವ್ಯದಲ್ಲಿದ್ದ ಉತ್ತರಾಖಂಡ ಮೂಲದ ಯೋಧ ಪ್ರದೀಪ್‌ ಕುಮಾರ್‌ ಬಂಧಿತ ಆರೋಪಿ. ಮೂರು ವರ್ಷಗಳ ಹಿಂದಷ್ಟೇ ಈತ ಸೇನೆ ಸೇರಿದ್ದು,ಪಾಕ್‌ ಗೂಢಚಾರಿ ಮಹಿಳೆಯ ಹನಿಟ್ರ್ಯಾಪ್‌ಗೆ ಸಿಲುಕಿದ್ದ.ಆತನಚಲನವಲನದ ಮೇಲೆ ಹಲವು ದಿನಗಳಿಂದ ಕಣ್ಗಾವಲಿರಿಸಿ, ಮೇ 18ರಂದು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಆರು ತಿಂಗಳ ಹಿಂದೆ ಕುಮಾರ್‌ ಮೊಬೈಲ್‌ಗೆ ಕರೆ ಮಾಡಿದ ಗೂಢಚಾರಿ ಮಹಿಳೆ, ಬೆಂಗಳೂರಿನಲ್ಲಿ ಸೇನೆಯಲ್ಲಿ ನರ್ಸ್‌ ಆಗಿರುವುದಾಗಿ ಪರಿಚಯಿಸಿಕೊಂಡಿದ್ದಾಳೆ. ಮದುವೆಯ ಪ್ರಸ್ತಾಪವಿಟ್ಟು ದೆಹಲಿಯಲ್ಲಿ ಭೇಟಿಯಾಗುವಂತೆ ನಂಬಿಸಿ,ಹನಿಟ್ರ್ಯಾಪ್‌ಗೆ ಬೀಳಿಸಿಕೊಂಡಿದ್ದಾಳೆ. ನಂತರಫೇಸ್‌ಬುಕ್ ಮತ್ತು ವಾಟ್ಸ್‌ ಆ್ಯಪ್‌ ಮೂಲಕ ಸೇನೆಯ ಗೋಪ್ಯ ಮಾಹಿತಿಯನ್ನು ಕುಮಾರ್‌ನಿಂದ ಆಕೆ ಪಡೆದುಕೊಂಡಿದ್ದಾಳೆ ಎಂದು ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT