ಲಖನೌ: ಪ್ರೀತಿಸುತ್ತಿದ್ದಾಳೆ ಎಂದು ತಿಳಿದು ಯುವತಿಯ ಕುಟುಂಬದವರು ಆಕೆ ಮತ್ತು ಆಕೆಯ ಪ್ರಿಯಕರನನ್ನು ಥಳಿಸಿ ಕೊಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಟಾ ಜಿಲ್ಲೆಯ ಸುಹಾಗ್ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೊಲೆಯಾದ ಶಿವಾನಿ ಮತ್ತು ದೀಪಕ್ ಇಬ್ಬರು ಒಂದೇ ಗ್ರಾಮ ಮತ್ತು ಒಂದೇ ಸಮುದಾಯದವರಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
.ಬೆಂಗಳೂರು–ಕಡಪ–ವಿಜಯವಾಡ ಆರ್ಥಿಕ ಕಾರಿಡಾರ್: ಎನ್ಎಚ್ಎಐನಿಂದ 4 ಗಿನ್ನೆಸ್ ದಾಖಲೆ.IND vs NZ: ವಿರಾಟ್ ಕೊಹ್ಲಿ ಆರ್ಭಟ, ಭಾರತ ಶುಭಾರಂಭ.
ರಾತ್ರಿ 8.30 ಸುಮಾರಿಗೆ ದೀಪಕ್, ಶಿವಾನಿಯನ್ನು ಭೇಟಿಯಾಗಲು ಆಕೆಯ ಮನೆಗೆ ತೆರಳಿದ್ದನು. ಇವರಿಬ್ಬರು ಟೆರೇಸ್ನಲ್ಲಿ ಏಕಾಂತದಲ್ಲಿದ್ದರು. ಇದನ್ನು ನೋಡಿದ ಶಿವಾನಿಯ ಕುಟುಂಬದವರು ಕೋಪಕೊಂಡು ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ. ಶಿವಾನಿ ಸ್ಥಳದಲ್ಲೇ ಮೃತಪಟ್ಟರೆ, ದೀಪಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಎಸ್ಎಸ್ಪಿ ಶ್ಯಾಮ್ ನಾರಾಯಣ್ ಸಿಂಗ್ ಹೇಳಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಎಟಾ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
.ಲಕ್ಕುಂಡಿ | ಸಿಕ್ಕಿದ್ದು ನಿಧಿಯಲ್ಲ, ಮುತ್ತಜ್ಜರಿಟ್ಟಿದ್ದ ಚಿನ್ನ: ಅಧಿಕಾರಿಗಳು.ಹೈಕೋರ್ಟ್ನಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ: ಏಳು ಮಂದಿ ವಿರುದ್ಧ ಪ್ರಕರಣ.
ಎರಡು ಕುಟುಂಬದವರು ಈವರೆಗೆ ಯಾವುದೇ ದೂರು ದಾಖಲಿಸಿಲ್ಲ ಎಂದೂ ಸ್ಥಳೀಯ ಎಸ್ಎಚ್ಒ ರಿತೇಶ್ ಠಾಕೂರ್ ತಿಳಿಸಿದ್ದಾರೆ.
.ಕೆ.ಆರ್.ನಗರ | ‘2ಎ ಪ್ರವರ್ಗ’ಕ್ಕೆ ನಾಮಧಾರಿಗೌಡ: ಎಚ್.ಡಿ. ಕುಮಾರಸ್ವಾಮಿ ಭರವಸೆ .ಬರಗೂರು ರಾಮಚಂದ್ರಪ್ಪ ಅವರ ವಿಶ್ಲೇಷಣೆ: ಎಲ್ಲ ಧರ್ಮಗಳ ‘ವಿವೇಕ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.