ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Assembly Election Results:BJP ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ 5 ಅಂಶಗಳು

Published 3 ಡಿಸೆಂಬರ್ 2023, 15:55 IST
Last Updated 3 ಡಿಸೆಂಬರ್ 2023, 15:55 IST
ಅಕ್ಷರ ಗಾತ್ರ

Assembly Election Results:BJP ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ 5 ಅಂಶಗಳು ಇಲ್ಲಿವೆ..

1. ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಪಕ್ಷದ ಏಕೈಕ ಮುಖವಾಗಿಸಿಕೊಂಡು ಪ್ರಚಾರಕ್ಕೆ ಇಳಿಯಲಾಯಿತು. ಕಾಂಗ್ರೆಸ್‌ ಗ್ಯಾರಂಟಿಗೆ ಎದುರಾಗಿ ಮೋದಿ ಗ್ಯಾರಂಟಿ ಮಂತ್ರವನ್ನು ಪಠಿಸಲಾಯಿತು

2.ಮಧ್ಯಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ನಿಲ್ಲಲು ಹಾಲಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಮತ್ತೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲಿಲ್ಲ. ರಾಜಸ್ಥಾನ, ಛತ್ತೀಸಗಢದಲ್ಲಿಯೂ ಯಾವುದೇ ನಾಯಕರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸದೆ ಮೋದಿ ಅವರನ್ನೇ ಮತ ಸೆಳೆಯುವ ಏಕೈಕ ನೇತಾರನನ್ನಾಗಿ ಬಳಸಿದ ತಂತ್ರ ಫಲ ನೀಡಿತು

3. ಕೇಂದ್ರದ ಸಚಿವರು ಸೇರಿದಂತೆ ಪಕ್ಷದ ಹಲವು ಸಂಸದರನ್ನು ಅಭ್ಯರ್ಥಿಗಳನ್ನಾಗಿಸುವ ಕಸರತ್ತನ್ನೂ ಮಾಡಿತು. ಪ್ರಭಾವಿ ನಾಯಕರು ತಾವು ಗೆಲ್ಲುವುದರ ಜತೆಗೆ ಅಕ್ಕಪಕ್ಕದ ಕ್ಷೇತ್ರಗಳ ಅಭ್ಯರ್ಥಿಗಳನ್ನೂ ‘ದಡ’ ಮುಟ್ಟಿಸಿದರು

4. ಕಾಂಗ್ರೆಸ್‌, ಜಾತಿ ಜನಗಣತಿ ನಡೆಸುವ ಕುರಿತು ಪ್ರಚಾರದ ಉದ್ದಕ್ಕೂ ದೊಡ್ಡ ಸದ್ದು ಮಾಡಿತು. ‘ಯಾರು ಎಷ್ಟು ಸಂಖ್ಯೆಯಲ್ಲಿ ಇದ್ದಾರೋ ಅವರಿಗೆ ಅಷ್ಟು ಪಾಲು’ ಎಂದು ಘೋಷಣೆಯನ್ನೂ ಮೊಳಗಿಸಿತು. ‘ಬಡತನವೇ ದೊಡ್ಡ ಜಾತಿಭೂತ. ನಾವು ಅದನ್ನು ತೊಲಗಿಸಬೇಕು’ ಎನ್ನುವ ಮೂಲಕ ಮೋದಿ ಜಾತಿ ಜನಗಣತಿಯ ‘ಅಸ್ತ್ರ’ಕ್ಕೆ ಪ್ರತ್ಯುತ್ತರ ನೀಡಿದರು

5. ಹಿಂದಿ ಭಾಷಿಕ ರಾಜ್ಯಗಳಲ್ಲಿ ಎಸ್‌.ಸಿ, ಎಸ್‌.ಟಿ ಮತ್ತು ಮಹಿಳೆಯರ ಮತಗಳನ್ನು ಗಣನೀಯವಾಗಿ ಪಡೆಯುವಲ್ಲಿ ಸಫಲವಾಗಿದ್ದೂ ಪಕ್ಷವನ್ನು ಗೆಲುವಿನ ದಡಕ್ಕೆ ತಲುಪಿಸಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT