ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಮಾಚಲ ಉಪಚುನಾವಣೆ: ಮೂವರು ಪಕ್ಷೇತರರಿಗೆ ಬಿಜೆಪಿ ಟಿಕೆಟ್‌; ಜುಲೈ 10 ಮತದಾನ

Published 14 ಜೂನ್ 2024, 3:14 IST
Last Updated 14 ಜೂನ್ 2024, 3:14 IST
ಅಕ್ಷರ ಗಾತ್ರ

ಶಿಮ್ಲಾ: ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಮತ ಚಲಾಯಿಸಿದ್ದ ಮೂವರು ಪಕ್ಷೇತರ ಶಾಸಕರಿಗೆ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ನೀಡಿದೆ.

ಇವರು ಕಾಂಗ್ರೆಸ್‌ ಪಕ್ಷದ 6 ಶಾಸಕರ ಜೊತೆ ಸೇರಿಕೊಂಡು ಬಿಜೆಪಿಗೆ ಮತದಾನ ಮಾಡಿದ್ದರು. ನಂತರ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು.

ಇದೀಗ ಉಪಚುನಾವಣೆ ಘೋಷಣೆಯಾಗಿದ್ದು ಈ ಮೂವರಿಗೂ ಬಿಜೆಪಿ ಟಿಕೆಟ್‌ ನೀಡಿದೆ. ಗೆದಿದ್ದ ತಮ್ಮ ವಿಧಾನಸಭಾ ಕ್ಷೇತ್ರಗಳಿಂದಲೇ ಕಣಕ್ಕೆ ಇಳಿಯುತ್ತಿದ್ದಾರೆ.

ಆಶಿಶ್ ಶರ್ಮಾ (ಹಮೀರ್ಪುರ), ಹೋಶಿಯಾರ್ ಸಿಂಗ್ (ದೆಹ್ರಾ) ಮತ್ತು ಕೆ. ಎಲ್. ಠಾಕೂರ್ (ನಾಲಾಗಢ) ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಜುಲೈ 10ರಂದು ಮತದಾನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT