ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರವ್‌ ಮೋದಿ ಇರುವ ಜೈಲಿನಿಂದ ಶಂಕಿತ ಉಗ್ರ ಪರಾರಿ

Published 7 ಸೆಪ್ಟೆಂಬರ್ 2023, 15:26 IST
Last Updated 7 ಸೆಪ್ಟೆಂಬರ್ 2023, 15:26 IST
ಅಕ್ಷರ ಗಾತ್ರ

ಲಂಡನ್‌ : ವಜ್ರ ವ್ಯಾಪಾರಿ ನೀರವ್ ಮೋದಿ ಸೆರೆವಾಸ ಅನುಭವಿಸುತ್ತಿರುವ ಲಂಡನ್‌ನ ವಾಂಡ್ಸ್‌ವರ್ತ್ ಜೈಲಿನಿಂದ ಶಂಕಿತ ಉಗ್ರ ಪರಾರಿಯಾಗಿದ್ದು, ಆತನ ಪತ್ತೆಗಾಗಿ ದೇಶದಾದ್ಯಂತ ವಿಮಾನ ನಿಲ್ದಾಣ ಹಾಗೂ ಬಂದರುಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಬ್ರಿಟನ್‌ನ ಅಧಿಕೃತ ರಹಸ್ಯ ಕಾಯಿದೆ ಉಲ್ಲಂಘಿಸಿರುವ ಆರೋಪ ಎದುರಿಸುತ್ತಿರುವ ಬ್ರಿಟನ್‌ ಸೇನೆಯ ಮಾಜಿ ಯೋಧ ಡೇನಿಯಲ್ ಅಬೇದ್‌ ಖಲೀಫ್ (21) ಜೈಲಿನಿಂದ ಪರಾರಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಜೈಲಿನೊಳಗೆ ಸಾಮಗ್ರಿ ತರುವ ವ್ಯಾನ್‌ನ ಕೆಳಭಾಗದಲ್ಲಿ ಅವಿತು ಈತ ಪರಾರಿಯಾಗಿರುವುದಾಗಿ ಹೇಳಿದ್ದಾರೆ.

‘ಡೇನಿಯಲ್‌ನ ಪತ್ತೆಗಾಗಿ ತಂಡ ರಚಿಸಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ’ ಎಂದು ಭಯೋತ್ಪಾದಕ ನಿಗ್ರಹ ದಳದ ಮುಖ್ಯಸ್ಥ ಕಮಾಂಡರ್ ಡೊಮಿನಿಕ್ ಮರ್ಫಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT