ಹೈದರಾಬಾದ್: ಹೈದರಾಬಾದ್ನ ಖಾಸಗಿ ಶಾಲೆಯ ಕಟ್ಟಡವನ್ನು ಡ್ರಗ್ಸ್ ಉತ್ಪಾದನೆ ಮಾಡುವ ಘಟಕವಾಗಿ ಪರಿವರ್ತಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಮೇಧಾ ಶಾಲೆಯ ನಿರ್ದೇಶಕ ಜಯಪ್ರಕಾಶ ಗೌಡ, ಗುರುವಾರೆಡ್ಡಿ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು ಎಂಟು ರಿಯಾಕ್ಟರ್ಗಳು ಹಾಗೂ ಡ್ರೈಯರ್ಗಳನ್ನು ವಶಪಡಿಸಿಕೊಂಡಿದ್ದಾರೆ.

ಇದೇ ವೇಳೆ ₹21 ಲಕ್ಷ ನಗದು, 7 ಕೆ,ಜಿ ಆಲ್ಫ್ರಾಜೋಲಮ್ ಸೇರಿದಂತೆ ಕಚ್ಚಾ ರಾಸಾಯನಿಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸೋಮವಾರದಿಂದ ಶನಿವಾರದವರೆಗೆ ಡ್ರಗ್ಸ್ ತಯಾರಿಕೆ ಮಾಡಿ, ಭಾನುವಾರ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.