ನವದೆಹಲಿ: ಮಧುಮೇಹ ಕುರಿತು ಸಂಶೋಧನೆಗೆ ನೆರವಾಗುವ, ದೇಶದ ಮೊದಲ ‘ಡಯಾಬಿಟಿಸ್ ಬಯೋಬ್ಯಾಂಕ್’ ಅನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಚೆನ್ನೈನಲ್ಲಿ ಸ್ಥಾಪಿಸಿದೆ.

ಮದ್ರಾಸ್ ಡಯಾಬಿಟಿಸ್ ರಿಸರ್ಚ್ ಫೌಂಡೇಷನ್ (ಎಂಡಿಆರ್ಎಫ್) ಸಹಯೋಗದಲ್ಲಿ ಇದನ್ನು ಸ್ಥಾಪಿಸಲಾಗಿದೆ.

‘ಸಂಸ್ಥೆಯಲ್ಲಿಯೇ ಕಾರ್ಯ ನಿರ್ವಹಿಸುವ ಈ ‘ಬಯೋಬ್ಯಾಂಕ್’, ಮಧುಮೇಹಕ್ಕೆ ಸಂಬಂಧಿಸಿದ ಜೈವಿಕ ಮಾದರಿಗಳ ಸಂಗ್ರಹ, ವಿಶ್ಲೇಷಣೆ ಹಾಗೂ ದತ್ತಾಂಶ ಸಿದ್ಧಪಡಿಸಲಾಗುವುದು’ ಎಂದು ಎಂಡಿಆರ್ಎಫ್ ಮುಖ್ಯಸ್ಥ ಡಾ.ವಿ.ಮೋಹನ್ ತಿಳಿಸಿದ್ದಾರೆ.

ಟೈಪ್–1, ಟೈಪ್–2 ಹಾಗೂ ಗರ್ಭಧಾರಣೆ ಸಂದರ್ಭದಲ್ಲಿ ಮಹಿಳೆಯರಲ್ಲಿ ಕಂಡುಬರುವ ಡಯಾಬಿಟಿಸ್ ಹಾಗೂ ಮಕ್ಕಳಲ್ಲಿ ಕಾಣಿಸುವ ಡಯಾಬಿಟಿಸ್ಗೆ ಸಂಬಂಧಿಸಿದ ರಕ್ತದ ಮಾದರಿಗಳ ಸಂಗ್ರಹ ಇಲ್ಲಿದೆ ಎಂದು ತಿಳಿಸಿದ್ದಾರೆ.

ಡಯಾಬಿಟಿಸ್ಗೆ ಕಾರಣವಾಗುವ ಅಂಶಗಳು, ಡಯಾಬಿಟಿಸ್ನಿಂದ ಕಂಡು ಬರುವ ಇತರ ಆರೋಗ್ಯ ಸಮಸ್ಯೆಗಳ ಕುರಿತು ಹೆಚ್ಚಿನ ಸಂಶೋಧನೆಗೆ ಇಲ್ಲಿನ ದತ್ತಾಂಶ ಒದಗಿಸಲಾಗುವುದು ಎಂದೂ ಅವರು ಹೇಳಿದ್ದಾರೆ.

‘ಡಯಾಬಿಟಿಸ್ ಬಯೋಬ್ಯಾಂಕ್’ ಸ್ಥಾಪನೆಯ ಉದ್ದೇಶ ಹಾಗೂ ಸಂಸ್ಥೆ ಕುರಿತು ಸಮಗ್ರ ವಿವರಗಳನ್ನು ಒಳಗೊಂಡ ವರದಿ ‘ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್’ನಲ್ಲಿ ಕಳೆದ ವಾರ ಪ್ರಕಟವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.