ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೇಠಿಯಿಂದ ಸ್ಪರ್ಧಿಸ್ತಾರಾ ವಾದ್ರಾ? ರಾಜಕೀಯ ಪ್ರವೇಶದ ಸೂಚನೆ ಕೊಟ್ಟ ಸೋನಿಯಾ ಅಳಿಯ

Published 4 ಏಪ್ರಿಲ್ 2024, 13:54 IST
Last Updated 4 ಏಪ್ರಿಲ್ 2024, 13:54 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರ ಪತಿ ರಾಬರ್ಟ್ ವಾದ್ರಾ ರಾಜಕೀಯ ಪ್ರವೇಶದ ಸೂಚನೆ ಕೊಟ್ಟಿದ್ದಾರೆ.

ತಾವು ಸಂಸದರಾಗಲು ಬಯಸಿದರೆ ಅಮೇಠಿ ಕ್ಷೇತ್ರವನ್ನು ಪ್ರತಿನಿಧಿಸುವಂತೆ ಕ್ಷೇತ್ರದ ಜನ ಬಯಸುತ್ತಿದ್ದಾರೆ ಎಂದು ರಾಬರ್ಟ್ ವಾದ್ರಾ ಹೇಳಿದ್ಧಾರೆ.

ರಾಯ್ ಬರೇಲಿ, ಅಮೇಠಿ ಮತ್ತು ಸುಲ್ತಾನ್‌ಪುರ ಕ್ಷೇತ್ರಗಳ ಅಭಿವೃದ್ಧಿಗೆ ಗಾಂಧಿ ಕುಟುಂಬ ಶ್ರಮಿಸಿದೆ. ಹಾಲಿ ಸಂಸದರಿಂದ ಅಮೇಠಿಯ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಕೆಯನ್ನು(ಸ್ಮೃತಿ ಇರಾನಿ) ಆಯ್ಕೆ ಮಾಡಿ ನಾವು ತಪ್ಪು ಮಾಡಿದೆವು ಎಂದು ಪರಿತಪಿಸುತ್ತಿದ್ದಾರೆ ಎಂದು ವಾದ್ರಾ ಎಎನ್‌ಐಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ಮೊದಲು ಸಂಸದರಾಗಬೇಕೆಂದು ಬಯಸುತ್ತೇನೆ. ಬಳಿಕ, ನಾನೂ ರಾಜಕೀಯಕ್ಕೆ ಬರಲು ಇಚ್ಛಿಸುತ್ತೇನೆ. ಜನರು ಮತ್ತು ವಿವಿಧ ಪಕ್ಷಗಳ ಸಂಸದರ ಜೊತೆ ಚರ್ಚೆ ನಡೆಸಿರುವೆ. ಅವರೆಲ್ಲ ತಮ್ಮ ಪಕ್ಷವನ್ನು ಪ್ರತಿನಿಧಿಸುವಂತೆ ಒತ್ತಾಯಿಸಿದ್ದಾರೆ. ರಾಜಕೀಯಕ್ಕೆ ಬರಲು ವಿಳಂಬವೇಕೆ? ಎಂದು ಕೇಳುತ್ತಿದ್ದಾರೆ. ಅವರು ನನಗೆ ಬೆಂಬಲ ನೀಡುವ ಭರವಸೆ ಸಹ ಕೊಟ್ಟಿದ್ದಾರೆ. ದೇಶದ ಬೇರೆ ಬೇರೆ ಪಕ್ಷಗಳ ನಾಯಕರು ನನ್ನನ್ನು ಆಹ್ವಾನಿಸಿದ್ದಾರೆ. ಪಕ್ಷಬೇಧವಿಲ್ಲದೆ ಹಲವು ಪಕ್ಷಗಳಲ್ಲಿ ನನಗೆ ಗೆಳೆಯರಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಪಕ್ಷದ ಹಿಡಿತದಲ್ಲಿದ್ದ ಅಮೇಠಿಯನ್ನು ರಾಹುಲ್ ಗಾಂಧಿ ಪ್ರತಿನಿಧಿಸುತ್ತಿದ್ದರು. 2019ರಲ್ಲಿ ಸ್ಮೃತಿ ಇರಾನಿ ಎದುರು ಸೋಲು ಅನುಭವಿಸಿದ ಅವರು ಈ ಬಾರಿ ಕೇರಳದ ವಯನಾಡು ಕ್ಷೇತ್ರದಿಂದ ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT