ಮುಂಬೈ: ಮಹಾರಾಷ್ಟ್ರದ ಬಹುತೇಕ ಕಡೆ ಬುಧವಾರ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿರುವ ಹವಮಾನ ಇಲಾಖೆ, ಸೋಲಾಪುರ ಹೊರತುಪಡಿಸಿ ಉಳಿದ ಭಾಗಗಳಿಗೆ ಯೆಲ್ಲೊ ಮತ್ತು ಆರೆಂಜ್ ಅಲರ್ಟ್ ಘೋಷಿಸಿದೆ.

ಸತಾರಾ, ನಾಸಿಕ್, ಪುಣೆ, ಅಹಲ್ಯಾನಗರ, ಬೀಡ್, ಛತ್ರಪತಿ ಸಂಭಾಜಿನಗರ, ಜಲ್ನಾ, ಅಮರಾವತಿ, ಅಕೋಲಾ, ಯಾವತಮಾಲ್, ಭಂಡಾರಾ, ಚಂದ್ರಾಪುರ ಮತ್ತು ಗೊಂಡಿಯಾ ಸೇರಿದಂತೆ 13 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.

ಪಾಲ್ಗರ್, ಠಾಣೆ, ರಾಯಗಢ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ನೀಡಿದ್ದು, ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಮಂಗಳವಾರ ರಾತ್ರಿ ರಾಜ್ಯದ ಕೆಲವೆಡೆ ಸಾಧಾರಣ ಮಳೆಯಾಗಿದ್ದು, ಬಿಸಿಲ ಬೇಗೆಯನ್ನು ತಣಿಸಿದೆ. ಚೆಂಬೂರು, ಮಾತುಂಗಾ ಮತ್ತು ವಡಾಲಾ ಮಹಾನಗರ ಪ್ರದೇಶಗಳಲ್ಲಿ ಮಳೆ ಸುರಿದಿತ್ತು. ಅಚಾನಕ್ ಆಗಿ ಸುರಿದ ಮಳೆಗೆ ಜನರು ನೆನೆದುಕೊಂಡೆ ಮನೆ ಸೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.