ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷಿಣದ ರಾಜ್ಯಗಳ ಭೇಟಿ ಕುರಿತು ಕಾಂಗ್ರೆಸ್ ಶುಕ್ರವಾರ ವಾಗ್ದಾಳಿ ನಡೆಸಿದೆ. ಭಾರತ ಜೋಡೊ ಯಾತ್ರೆಯ ಪ್ರಭಾವ ಏನೆಂದು ಬಿಜೆಪಿಗೆ ಈಗ ಮನದಟ್ಟಾಗಿದೆ. ಆದರೆ ಯಾವ ಬೂಟಾಟಿಕೆಗಳೂ ಜನರೊಂದಿಗೆ ನಡೆದು, ಅವರ ಕಷ್ಟಗಳಿಗೆ ಕಿವಿಯಾಗುವುದಕ್ಕೆ ಸಮವಲ್ಲ ಎಂದು ಹೇಳಿದೆ.

‘ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಪಾದಯಾತ್ರೆ ನಡೆಸುವ ಭಾರತ ಜೋಡೊ ಯಾತ್ರೆಯ ಪರಿಣಾಮ ಏನು ಎಂಬುದು ಮನದಟ್ಟಾ ಗಿದೆ. ಪ್ರಧಾನಿ ಮೋದಿ ಅವರು ಎರಡು ದಿನಗಳ ಕಾಲ ದಕ್ಷಿಣದ ನಾಲ್ಕು ರಾಜ್ಯಗಳ ಭೇಟಿ ಆರಂಭಿಸಿದ್ದಾರೆ. ನಿಸ್ಸಂದೇಹವಾಗಿ ಒಳ್ಳೆಯ ಫೋಟೋಶೂಟ್ ಇರಲಿದೆ. ಆದರೆ,ಇಂಥ ಯಾವ ಬೂಟಾಟಿಕೆಗಳೂ ಜನರೊಂದಿಗೆ ಹೆಜ್ಜೆ ಹಾಕುತ್ತಾ, ಅವರ ಮಾತುಗಳನ್ನು ಆಲಿಸುವುದಕ್ಕೆ ಸಮವಲ್ಲ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಶುಕ್ರವಾರದಿಂದ ಕರ್ನಾಟಕ, ತಮಿಳುನಾಡುಗೆ ಭೇಟಿ ನೀಡಿದ್ದು ಶನಿವಾರದಂದು ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ತೆರಳಲಿದ್ದಾರೆ. ಈ ವೇಳೆ ಹಲವು ಕಾರ್ಯಕ್ರಮಗಳು, ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.