ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಪಟೈಟಿಸ್‌: ಭಾರತಕ್ಕೆ ಎರಡನೇ ಸ್ಥಾನ

Published 10 ಏಪ್ರಿಲ್ 2024, 15:55 IST
Last Updated 10 ಏಪ್ರಿಲ್ 2024, 15:55 IST
ಅಕ್ಷರ ಗಾತ್ರ

ಜಿನಿವಾ: ಭಾರತದಲ್ಲಿ 2022ರಲ್ಲಿ ‘ಹೆಪಟೈಟಿಸ್‌ ಬಿ ಮತ್ತು ಸಿ’ನ 3.5 ಕೋಟಿ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಅತಿ ಹೆಚ್ಚು ಸೋಂಕು ಇರುವ ಜಗತ್ತಿನ ಎರಡನೇ ದೇಶವಾಗಿದೆ. ಮೊದಲನೇ ಸ್ಥಾನದಲ್ಲಿ ಚೀನಾ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ವರದಿ ತಿಳಿಸಿದೆ.

ಜಾಗತಿಕ ಹೆಪಟೈಟಿಸ್–2024 ವರದಿ ಮಂಗಳವಾರ ಬಿಡುಗಡೆಯಾಗಿದ್ದು, 2022ರಲ್ಲಿ ಜಗತ್ತಿನಾದ್ಯಂತ 25.4 ಕೋಟಿ ಮಂದಿಗೆ ‘ಹೆಪಟೈಟಿಸ್‌ ಬಿ’ ಮತ್ತು 5 ಕೋಟಿ ಮಂದಿಗೆ ‘ಹೆಪಟೈಟಿಸ್‌ ಸಿ’ ಇತ್ತು ಎಂದು ತಿಳಿಸಿದೆ.

‘ಭಾರತದಲ್ಲಿ 2.98 ಕೋಟಿ ‘ಹೆಪಟೈಟಿಸ್‌ ಬಿ’ ಪ್ರಕರಣಗಳು ಮತ್ತು 55 ಲಕ್ಷ ‘ಹೆಪಟೈಟಿಸ್‌ ಸಿ’  ಪ್ರಕರಣಗಳು ಪತ್ತೆಯಾಗಿದ್ದವು.  ಅದೇ ವರ್ಷ ಚೀನಾದಲ್ಲಿ 8.55 ಕೋಟಿ ಪ್ರಕರಣಗಳು ಪತ್ತೆಯಾಗಿದ್ದವು’ ಎಂದಿದೆ.

‘ಸೋಂಕಿನಿಂದ ಮೃತಪಟ್ಟವರ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. 2019ರಲ್ಲಿ 11 ಲಕ್ಷ ಜನರು ಮೃತಪಟ್ಟರೆ, 2022ರಲ್ಲಿ 13 ಲಕ್ಷ ಜನ ಸಾವಿಗೀಡಾಗಿದ್ದಾರೆ’ ಎಂದು ಎಚ್ಚರಿಸಿದೆ.

‘ಪ್ರತಿ ದಿನ ಹೆಪಟೈಟಿಸ್‌ನಿಂದ ಜಗತ್ತಿನಾದ್ಯಂತ 3,500 ಮಂದಿ ಸಾಯುತ್ತಿದ್ದಾರೆ’ ಎಂದೂ ಹೇಳಿದೆ.

ವರದಿ ಪ್ರಕಾರ, ಶೇ 50ರಷ್ಟು ಹೆಪಟೈಟಿಸ್‌ ಬಿ ಮತ್ತು ಸಿ ಸೋಂಕು 30–54 ವರ್ಷದವರಿಗೆ ತಗುಲಿದೆ. ಶೇ 12ರಷ್ಟು ಸೊಂಕು ಮಕ್ಕಳಿಗೆ ಅಥವಾ 18 ವರ್ಷದೊಳಗಿನವರಿಗೆ ತಗುಲಿದೆ. ಒಟ್ಟು ಸೋಂಕಿತರ ಪೈಕಿ ಶೇ 58ರಷ್ಟು ಮಂದಿ ಪುರುಷರು.

ಹೆಪಟೈಟಿಸ್‌ ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಕಾಯಿಲೆ. ಇದು ಅನೇಕ ಆರೋಗ್ಯ ಸಮಸ್ಯೆ ಮತ್ತು ಸಾವಿಗೂ ಕಾರಣವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT