‘ಹಸಿರು ಇಂಧನ ಉತ್ಪಾದನೆಯ ಹೆಚ್ಚಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ. ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳು ಅಗ್ಗದ ನವೀಕರಿಸಬಹುದಾದ ಇಂಧನ ಉತ್ಪಾದನೆ ವ್ಯವಸ್ಥೆಗೆ ಬದಲಾವಣೆಯಾಗುವವರೆಗೆ ಕಾರ್ಯನಿರ್ವಹಿಸಲಿವೆ’ಎಂದು ಮೇ 26ರಂದು ಕೇಂದ್ರ ಇಂಧನ ಸಚಿವಾಲಯ, ಕೇಂದ್ರ ಮತ್ತು ರಾಜ್ಯದ ಉನ್ನತ ಅಧಿಕಾರಿಗಳಿಗೆ ಕಳುಹಿಸಿರುವ ಪತ್ರದಲ್ಲಿ ತಿಳಿಸಿದೆ.