ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

500ಕ್ಕೂ ಅಧಿಕ ಉತ್ಪನ್ನಗಳ ಪೂರೈಕೆ: ಭಾರತಕ್ಕೆ ರಷ್ಯಾ ಬೇಡಿಕೆ

Last Updated 29 ನವೆಂಬರ್ 2022, 15:40 IST
ಅಕ್ಷರ ಗಾತ್ರ

ನವದೆಹಲಿ (ರಾಯಿಟರ್ಸ್‌): ‘ಕಾರು, ವಿಮಾನ ಹಾಗೂ ರೈಲುಗಳ ಬಿಡಿಭಾಗ ಸೇರಿದಂತೆ 500ಕ್ಕೂ ಅಧಿಕ ಉತ್ಪನ್ನಗಳನ್ನು ಪೂರೈಸುವಂತೆ ರಷ್ಯಾವು ಭಾರತದ ಎದುರು ಬೇಡಿಕೆ ಇಟ್ಟಿದೆ’ ಎಂದು ಅಧಿಕೃತ ಮೂಲಗಳು ಮಂಗಳವಾರ ತಿಳಿಸಿವೆ.

‘ಯಾವೆಲ್ಲಾ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತದೆ. ಅವುಗಳ ಪ್ರಮಾಣ ಎಷ್ಟು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ’ ಎಂದೂ ಹೇಳಿವೆ.

‘ಭಾರತವು ರಷ್ಯಾ ಜೊತೆಗಿನ ವ್ಯಾಪಾರದ ಕೊರತೆ ತಗ್ಗಿಸಲು ಯತ್ನಿಸುತ್ತಿರುವ ಸಮಯದಲ್ಲೇ ಆ ದೇಶದಿಂದ ಬೇಡಿಕೆ ಬಂದಿದೆ. ಈ ಮೂಲಕ ತನ್ನ ವ್ಯಾಪಾರ ವೃದ್ಧಿಸಿಕೊಳ್ಳಲು ಭಾರತವು ಉತ್ಸುಕವಾಗಿದೆ. ಕೆಲ ಕಂಪನಿಗಳು ಈ ಕುರಿತು ಕಳವಳ ವ್ಯಕ್ತಪಡಿಸಿವೆ’ ಎಂದೂ ತಿಳಿಸಿವೆ.

‘ತಮಗೆ ಅಗತ್ಯವಿರುವ ಕಚ್ಚಾ ವಸ್ತುಗಳು ಹಾಗೂ ಸಲಕರಣೆಗಳ ಪಟ್ಟಿಯನ್ನು ತನಗೆ ಒದಗಿಸುವಂತೆ ರಷ್ಯಾದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಪ್ರಮುಖ ಕಂಪನಿಗಳಿಗೆ ಕೇಳಿದೆ’ ಎಂದು ಮಾಸ್ಕೊದ ಮೂಲಗಳು ಹೇಳಿವೆ.

ರಷ್ಯಾದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ಭಾರತದ ವಿದೇಶಾಂಗ ಮತ್ತು ವಾಣಿಜ್ಯ ಸಚಿವಾಲಯ ಹಾಗೂ ಪ್ರಧಾನ ಮಂತ್ರಿಯವರ ಕಾರ್ಯಾಲಯವು ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪಾಶ್ಚಿಮಾತ್ಯ ರಾಷ್ಟ್ರಗಳು ವಿಧಿಸಿರುವ ನಿರ್ಬಂಧಗಳಿಂದಾಗಿ ರಷ್ಯಾದಲ್ಲಿ ಕೆಲ ಪ್ರಮುಖ ಉತ್ಪನ್ನಗಳ ಅಭಾವ ಸೃಷ್ಟಿಯಾಗಿದೆ. ರಷ್ಯಾದಲ್ಲಿರುವ ಬಹುಪಾಲು ವಿಮಾನಗಳು ವಿದೇಶಿ ನಿರ್ಮಿತವಾಗಿವೆ. ಹೀಗಾಗಿ ವಿಮಾನಯಾನ ಸಂಸ್ಥೆಗಳು ಬಿಡಿಭಾಗಗಳ ಕೊರತೆ ಎದುರಿಸುತ್ತಿವೆ. ಕಾರುಗಳ ಬಿಡಿಭಾಗಗಳಿಗೂ ಬೇಡಿಕೆ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT