ನವದೆಹಲಿ: ಆರ್ಥಿಕತೆ ಮತ್ತು ಭದ್ರತಾ ಕ್ಷೇತ್ರಗಳಲ್ಲಿ ಪಾಲುದಾರಿಕೆ ಬಲಪಡಿಸಲು ಭಾರತ –ಆಸ್ಟ್ರೇಲಿಯಾ ನಿರ್ಧರಿಸಿವೆ. ಮುಕ್ತ, ಸೇರ್ಪಡೆಯುಕ್ತ ಮತ್ತು ನಿಯಮ ಆಧಾರಿತ ಹಿಂದೂ ಮಹಾಸಾಗರ–ಪೆಸಿಫಿಕ್ ಪ್ರದೇಶ ವಲಯಕ್ಕೆ ಬದ್ಧತೆಯನ್ನು ಪ್ರಕಟಿಸಿವೆ.
ಭಾರತ ಮತ್ತು ಆಸ್ಟ್ರೇಲಿಯಾ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಎಸ್.ಜೈಶಂಕರ್, ‘ಮುಂದಿನ ವರ್ಷ ಕ್ವಾಡ್ ಸದಸ್ಯ ರಾಷ್ಟ್ರಗಳ ಸಭೆಗೆ ಭಾರತ ಸಿದ್ಧತೆಯನ್ನು ನಡೆಸಿದೆ’ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಪೆನ್ನಿ ವೊಂಗ್ ಅವರು ಇದ್ದರು. ಆಸ್ಟ್ರೇಲಿಯಾ, ಭಾರತವಲ್ಲದೆ, ಜಪಾನ್‌ಮತ್ತು ಅಮೆರಿಕ ಕ್ವಾಡ್ ಸಮೂಹದ ಸದಸ್ಯ ರಾಷ್ಟ್ರಗಳಾಗಿವೆ.
ಸಮಗ್ರ ಆರ್ಥಿಕ ಸಹಕಾರ ಒಪ್ಪಂದದ (ಸಿಇಸಿಎ) ಚರ್ಚೆಗಳನ್ನು ಮುಂದುವರಿಸುವ ಮಹತ್ವ ಕುರಿತು ಚರ್ಚಿಸಲಾಯಿತು. ಅಲ್ಲದೆ, ವಿದ್ಯಾರ್ಥಿಗಳು ಮತ್ತು ವೃತ್ತಿಪರರ ವಿನಿಮಯ ಕಾರ್ಯಕ್ರಮ ಕರಿತು ಚರ್ಚೆ ನಡೆಯಿತು ಎಂದು ಜೈಶಂಕರ್ ತಿಳಿಸಿದರು.
ಪಶ್ಚಿಮ ಏಷ್ಯಾ ಭಾಗದಲ್ಲಿನ ಪರಿಸ್ಥಿತಿ ಕುರಿತು ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು ಎಂದು ಅವರು ತಿಳಿಸಿದರು. ಇಸ್ರೇಲ್ ಮತ್ತು ಹಮಾಸ್ ಬಿಕ್ಕಟ್ಟು ಕುರಿತ ಪ್ರಶ್ನೆಗೆ, ‘ಇದು ಸಂಕೀರ್ಣ ಮತ್ತು ಸವಾಲಿನ ಪರಿಸ್ಥಿತಿ. ಭಿನ್ನ ಆಯಾಮಗಳಿವೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.