ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಕ್ರೀಡಾಕೂಟ: ಶೂಟಿಂಗ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ

ಚೀನಾದ ಹಾಂಗ್‌ಜೌನಲ್ಲಿ ನಡೆಯುತ್ತಿರುವ 19 ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಶೂಟಿಂಗ್ ತಂಡಕ್ಕೆ ಮತ್ತೊಂದು ಚಿನ್ನದ ಪದಕ ಲಭಿಸಿದೆ.
Published 1 ಅಕ್ಟೋಬರ್ 2023, 6:26 IST
Last Updated 1 ಅಕ್ಟೋಬರ್ 2023, 6:26 IST
ಅಕ್ಷರ ಗಾತ್ರ

ಹಾಂಗ್‌ಜೌ: ಚೀನಾದ ಹಾಂಗ್‌ಜೌನಲ್ಲಿ ನಡೆಯುತ್ತಿರುವ 19 ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಶೂಟಿಂಗ್ ತಂಡಕ್ಕೆ ಮತ್ತೊಂದು ಚಿನ್ನದ ಪದಕ ಲಭಿಸಿದೆ.

ಪುರುಷರ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ ಪೃಥ್ವಿರಾಜ್ ತೋಂಡೈಮನ್, ಕಿನಾನ್ ಚೆನ್ನೈ ಹಾಗೂ ಜೋರಾವರ್ ಸಿಂಗ್ ಸಂಧು ಅವರ ತಂಡಕ್ಕೆ ಭಾನುವಾರ ಚಿನ್ನದ ಪದಕ ಲಭಿಸಿದೆ. ಈ ತಂಡ ಇವೆಂಟ್‌ನಲ್ಲಿ 336 ಅಂಕಗಳನ್ನು ಗಳಿಸಿತ್ತು.

ಈ ತಂಡವನ್ನು ಅನೇಕ ಗಣ್ಯರು ಅಭಿನಂದಿಸಿದ್ದಾರೆ. ಇದರೊಂದಿಗೆ ಇಲ್ಲಿವರೆಗೆ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ 38 ಪದಕಗಳನ್ನು ಗೆದ್ದಿದೆ.

ಶೂಟಿಂಗ್‌ನಲ್ಲಿ ಒಟ್ಟು 7 ಚಿನ್ನದ ಪದಕಗಳು ಗೆದ್ದಂತಾಗಿದೆ. ಪುರುಷರ ಬ್ಯಾಡ್ಮಿಂಟನ್‌ ತಂಡ ಚಿನ್ನದ ಪದಕಕ್ಕೆ ಭಾನುವಾರ ಸೆಣಸಲಿದೆ. ಈ ಕುರಿತು ಲೈವ್ ಮಿಂಟ್ ವೆಬ್‌ಸೈಟ್ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT