ನವದೆಹಲಿ: ಸುಸ್ಥಿರ ಅಭಿವೃದ್ಧಿ ಗುರಿ (ಎಸ್ಡಿಜಿ) ಸಾಧನೆಯಲ್ಲಿ 167 ದೇಶಗಳ ಪೈಕಿ ಭಾರತವು ಮೊದಲ ಬಾರಿಗೆ ಅಗ್ರ 100ರಲ್ಲಿ ಸ್ಥಾನ ಪಡೆದಿದೆ ಎಂದು ಮಂಗಳವಾರ ಪ್ರಕಟವಾದ ವರದಿಯಲ್ಲಿ ಹೇಳಲಾಗಿದೆ.

ಯುಎನ್ ಸಸ್ಟೈನಬಲ್ ಡೆವಲಪ್ಮೆಂಟ್ ಸೊಲ್ಯೂಷನ್ಸ್ ನೆಟ್ವರ್ಕ್ನ 10ನೇ ಮತ್ತು ಇತ್ತೀಚಿನ ಸುಸ್ಥಿರ ಅಭಿವೃದ್ಧಿ ವರದಿ (SDR) ಪ್ರಕಾರ, 2025ರ ಎಸ್ಡಿಜಿ ಸಾಧನೆಯಲ್ಲಿ ಭಾರತವು 67 ಅಂಕಗಳೊಂದಿಗೆ 99ನೇ ಸ್ಥಾನದಲ್ಲಿದೆ. 74.4 ಅಂಕಗಳೊಂದಿಗೆ ಚೀನಾ 49ನೇ ಸ್ಥಾನದಲ್ಲಿದೆ. 75.2 ಅಂಕಗಳೊಂದಿಗೆ ಅಮೆರಿಕ 44ನೇ ಸ್ಥಾನದಲ್ಲಿದೆ.

2024ರಲ್ಲಿ ಭಾರತ 109ನೇ ಸ್ಥಾನದಲ್ಲಿತ್ತು. 2023ರಲ್ಲಿ 112ನೇ ಸ್ಥಾನ, 2022ರಲ್ಲಿ 121, 2021ರಲ್ಲಿ 120, 2020ರಲ್ಲಿ 117, 2019ರಲ್ಲಿ 115, 2018ರಲ್ಲಿ 112, ಮತ್ತು 2017ರಲ್ಲಿ 116ನೇ ಸ್ಥಾನದಲ್ಲಿತ್ತು.

ಭಾರತದ ನೆರೆಯ ರಾಷ್ಟ್ರಗಳಾದ ಭೂತಾನ್ 70.5 ಅಂಕಗಳೊಂದಿಗೆ 74ನೇ ಸ್ಥಾನದಲ್ಲಿದೆ. 68.6 ಅಂಕಗಳೊಂದಿಗೆ ನೇಪಾಳ 85ನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ 63.9 ಅಂಕಗಳೊಂದಿಗೆ 114ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ 57 ಅಂಕಗಳೊಂದಿಗೆ 140ನೇ ಸ್ಥಾನದಲ್ಲಿದೆ. ಮಾಲ್ಡೀವ್ಸ್ ಮತ್ತು ಶ್ರೀಲಂಕಾ ಕ್ರಮವಾಗಿ 53 ಮತ್ತು 93ನೇ ಸ್ಥಾನದಲ್ಲಿವೆ.

ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳು 2015ರಲ್ಲಿ ರೂಪಿಸಿದ್ದ ‘2030 ಕಾರ್ಯಸೂಚಿ’ಯ ಭಾಗವಾಗಿ ಒಟ್ಟು 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್ಡಿಜಿ) ನಿಗದಿಪಡಿಸಲಾಗಿದೆ. ಸುಸ್ಥಿರ ಅಭಿವೃದ್ಧಿ ಗುರಿ ಶ್ರೇಯಾಂಕವನ್ನು 0 ರಿಂದ 100 ರವರೆಗಿನ ಪ್ರಮಾಣದಲ್ಲಿ ಪ್ರಗತಿಯನ್ನು ಅಳೆಯುತ್ತದೆ. ಇಲ್ಲಿ '100' ಎಂದರೆ ದೇಶವು ಎಲ್ಲಾ 17 ಗುರಿಗಳನ್ನು ಸಾಧಿಸಿದೆ, '0' ಎಂದರೆ ಯಾವುದೇ ಪ್ರಗತಿಯನ್ನು ಸಾಧಿಸಿಲ್ಲ ಎಂದರ್ಥ.

2030ರ ವೇಳೆಗೆ ಸಾಧಿಸಬೇಕಾದ 17 ಗುರಿಗಳಲ್ಲಿ ಕೇವಲ ಶೇ.17 ರಷ್ಟನ್ನು ಮಾತ್ರ ಸಾಧಿಸಲಾಗಿದ್ದು, ಜಾಗತಿಕ ಮಟ್ಟದಲ್ಲಿ ಎಸ್ಡಿಜಿ ಪ್ರಗತಿ ಕುಂಠಿತಗೊಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅಗ್ರಸ್ಥಾನದಲ್ಲಿ ಫಿನ್ಲ್ಯಾಂಡ್

ಯುರೋಪಿಯನ್ ರಾಷ್ಟ್ರಗಳು, ವಿಶೇಷವಾಗಿ ನಾರ್ಡಿಕ್ ರಾಷ್ಟ್ರಗಳು, ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕದಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿವೆ.

ಫಿನ್ಲ್ಯಾಂಡ್ ಮೊದಲ ಸ್ಥಾನದಲ್ಲಿದೆ. ಸ್ವೀಡನ್ ಎರಡನೇ ಸ್ಥಾನದಲ್ಲಿದ್ದರೆ, ಡೆನ್ಮಾರ್ಕ್ ಮೂರನೇ ಸ್ಥಾನದಲ್ಲಿದೆ. ಟಾಪ್ 20ರಲ್ಲಿ ಸ್ಥಾನ ಪಡೆದ ದೇಶಗಳಲ್ಲಿ ಒಟ್ಟು 19 ದೇಶಗಳು ಯುರೋಪ್ನಲ್ಲಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸುಸ್ಥಿರ ಅಭಿವೃದ್ಧಿ ಗುರಿಗಳು

ಬಡತನ ನಿರ್ಮೂಲನೆ– ಯಾವ ಸ್ವರೂಪದಲ್ಲಿಯೂ ಬಡತನವಿರಬಾರದು. ಸಮಸ್ತ ನಾಗರಿಕರಿಗೂ ಸಾಮಾಜಿಕ ಭದ್ರತೆ ಇರಬೇಕು

ಶೂನ್ಯ ಹಸಿವು– ಹಸಿವಿನಿಂದ ಯಾರೂ ಬಳಲಬಾರದು. ಎಲ್ಲರಿಗೂ ಆಹಾರ ಭದ್ರತೆ ಇರಬೇಕು. ಪೌಷ್ಟಿಕಾಂಶಯುಕ್ತ ಆಹಾರ ದೊರೆಯಬೇಕು.

ಸುಸ್ಥಿರ ಕೃಷಿ ನೀತಿಗೆ ಉತ್ತೇಜನ

ಉತ್ತಮ ಆರೋಗ್ಯ– ಎಲ್ಲರಿಗೂ ಉತ್ತಮ ವೈದ್ಯಕೀಯ ಸೌಲಭ್ಯ ದೊರೆಯಬೇಕು. ಎಲ್ಲಾ ವಯಸ್ಸಿನವರು, ವರ್ಗದವರ ಆರೋಗ್ಯ ಉತ್ತಮ ಸ್ಥಿತಿಯಲ್ಲಿ ಇರಬೇಕು

ಗುಣಮಟ್ಟದ ಶಿಕ್ಷಣ– ಎಲ್ಲರನ್ನೂ ಒಳಗೊಂಡ ಶಿಕ್ಷಣ ನೀತಿ. ಜೀವನ ನಿರ್ವಹಣೆಗೆ ಅವಕಾಶಗಳನ್ನು ಒದಗಿಸುವಂತಹ ಗುಣಮಟ್ಟದ ಶಿಕ್ಷಣ ನೀತಿ

ಲಿಂಗ ಸಮಾನತೆ– ಲಿಂಗ ಸಮಾನತೆ ಎಲ್ಲೆಡೆ ಸಾಧ್ಯವಾಗಬೇಕು. ಮಹಿಳೆಯರು ಮತ್ತು ಬಾಲಕಿಯರ ಸಬಲೀಕರಣ

ಶುದ್ಧ ನೀರು ಮತ್ತು ಶುಚಿತ್ವ– ಎಲ್ಲರಿಗೂ ಶುದ್ಧನೀರಿನ ನಿರಂತರ ಲಭ್ಯತೆ ಮತ್ತು ಶುಚಿತ್ವ ನಿರ್ವಹಣೆಗೆ ಅಗತ್ಯವಾದ ಸೌಲಭ್ಯ

ಕೈಗೆಟಕುವ ಶುದ್ಧ ಇಂಧನ– ಎಲ್ಲರಿಗೂ ಕೈಗೆಟಕುವ ಬೆಲೆಯಲ್ಲಿ ಪರಿಸರ ಸ್ನೇಹಿ ಇಂಧನ ದೊರೆಯಬೇಕು

ಗುಣಮಟ್ಟದ ಕೆಲಸ ಮತ್ತು ಆರ್ಥಿಕ ಬೆಳವಣಿಗೆ– ಎಲ್ಲರಿಗೂ ಉತ್ತಮ ಗುಣಮಟ್ಟದ ಕೆಲಸ ದೊರೆಯಬೇಕು. ಎಲ್ಲರನ್ನೂ ಒಳಗೊಳ್ಳುವ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆ

ಕೈಗಾರಿಕೆ/ಅನ್ವೇಷಣೆ/ಮೂಲಸೌಕರ್ಯ– ಎಲ್ಲರನ್ನೂ ಒಳಗೊಂಡ ಮತ್ತು ಸುಸ್ಥಿರ ಕೈಗಾರಿಕಾ ಅಭಿವೃದ್ಧಿ

ಅಸಮಾನತೆ ನಿರ್ಮೂಲನೆ– ಜನರು/ಜಿಲ್ಲೆಗಳು/ರಾಜ್ಯಗಳು/ದೇಶಗಳ ನಡುವಣ ಅಸಮಾನತೆ ನಿರ್ಮೂಲನೆ

ಸುಸ್ಥಿರ ನಗರ ಮತ್ತು ಸಮುದಾಯಗಳು– ಜನವಸತಿ ಪ್ರದೇಶಗಳು ಸುರಕ್ಷಿತ ಮತ್ತು ಸುಸ್ಥಿರವಾಗಿರಬೇಕು

ಹೊಣೆಯಾಧಾರಿತ ಬಳಕೆ ಮತ್ತು ಉತ್ಪಾದನೆ– ಎಲ್ಲಾ ಸರಕು ಮತ್ತು ಸೇವೆಗಳ ಸುಸ್ಥಿರವಾದ ಉತ್ಪಾದನಾ ನೀತಿ ಮತ್ತು ಜವಾಬ್ದಾರಿಯುತ ಬಳಕೆ ಉತ್ತೇಜನ

ಹವಾಮಾನ– ಹವಾಮಾನ ವೈಪರೀತ್ಯ ಮತ್ತು ಅದರ ಪರಿಣಾಮಗಳ ನಿಯಂತ್ರಣಕ್ಕೆ ತಕ್ಷಣದ ಕ್ರಮಗಳು

ಜಲಚರ ಜೀವಿಗಳು– ಜಲಚರ ಜೀವಿಗಳ ಸಂರಕ್ಷಣೆ ಮತ್ತು ಸಮುದ್ರದ ಸಂಪನ್ಮೂಲಗಳ ಸುಸ್ಥಿರ ಬಳಕೆ

ನೆಲಜೀವಿಗಳು– ಪರಿಸರ ಸಂರಕ್ಷಣೆ, ಜೀವವೈವಿಧ್ಯ ಸಂರಕ್ಷಣೆ

ಶಾಂತಿ, ನ್ಯಾಯ ಮತ್ತು ಪ್ರಬಲ ಸಂಸ್ಥೆಗಳು– ಸಮುದಾಯಗಳಲ್ಲಿ ಶಾಂತಿಯನ್ನು ಉತ್ತೇಜಿಸಬೇಕು. ಎಲ್ಲರಿಗೂ ನ್ಯಾಯ ಕೈಗೆಟುಕಬೇಕು ಎಂಬುವುದಾಗಿದೆ.

.ಸುಸ್ಥಿರ ಅಭಿವೃದ್ಧಿ ಗುರಿ 'ಸಾಧನೆ ದುಬಾರಿ'; ಎರಡು ಹೆಜ್ಜೆ ಹಿಂದಕ್ಕಿರಿಸಿದ ಭಾರತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.