ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಿಪಣಿ ನೆರವಿನಿಂದ ಟಾರ್ಪಿಡೊ ಉಡ್ಡಯನ ಪರೀಕ್ಷೆ ಯಶಸ್ವಿ

Published 1 ಮೇ 2024, 13:44 IST
Last Updated 1 ಮೇ 2024, 13:44 IST
ಅಕ್ಷರ ಗಾತ್ರ

ಬಾಲೇಶ್ವರ (ಒಡಿಶಾ): ‘ಸೂಪರ್‌ಸಾನಿಕ್‌ ಕ್ಷಿಪಣಿಗಳ ಸಹಾಯದಿಂದ ಟಾರ್ಪಿಡೊ ಉಡ್ಡಯನ  ವ್ಯವಸ್ಥೆ’(ಎಸ್‌ಎಂಎಆರ್‌ಟಿ–ಸ್ಮಾರ್ಟ್‌)ಯ ಪರೀಕ್ಷಾರ್ಥ ಪ್ರಯೋಗ ಇಲ್ಲಿಗೆ ಸಮೀಪದ ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ ದ್ವೀಪದಲ್ಲಿ ಬುಧವಾರ ಯಶಸ್ವಿಯಾಗಿ ನೆರವೇರಿಸಲಾಯಿತು.

ಬೆಳಿಗ್ಗೆ 8.30ರ ವೇಳೆಗೆ, ಸಂಚಾರ ಲಾಂಚರ್‌ನ ಸಹಾಯದಿಂದ ಈ ವ್ಯವಸ್ಥೆಯ ಪರೀಕ್ಷೆಯನ್ನು ನೆರವೇರಿಸಲಾಯಿತು ಎಂದು ರಕ್ಷಣಾ ಸಚಿವಾಲಯ ಅಧಿಕಾರಿಗಳು ಹೇಳಿದ್ದಾರೆ.

‘ಕ್ಷಿಪಣಿ ವ್ಯವಸ್ಥೆಯ ಎಲ್ಲ ಭಾಗಗಳು ಸಮಪರ್ಕವಾಗಿ ಕಾರ್ಯನಿರ್ವಹಿಸುವುದನ್ನು ಈ ಪರೀಕ್ಷೆ ದೃಢಪಡಿಸಿದೆ. ಇದು ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ನಿಗ್ರಹ ಸಾಮರ್ಥ್ಯವನ್ನು ಹೆಚ್ಚಸಲಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮುಂದಿನ ತಲೆಮಾರಿನ, ಟಾರ್ಪಿಡೊ ಚಿಮ್ಮುವಂತೆ ಮಾಡುವ ಕಡಿಮೆ ತೂಕದ ಈ ‘ಸ್ಮಾರ್ಟ್‌’ ಕ್ಷಿಪಣಿ ವ್ಯವಸ್ಥೆಯನ್ನು ಡಿಆರ್‌ಡಿಒ ಅಭಿವೃದ್ಧಿಪಡಿಸಿದೆ.

ಶತ್ರುಪಾಳಯದ ಯುದ್ಧನೌಕೆಗಳನ್ನು ನಾಶಪಡಿಸುವ ಸಿಡಿತಲೆಗಳಿಗೆ ಟಾರ್ಪಿಡೊ ಎನ್ನಲಾಗುತ್ತದೆ. ಇವುಗಳನ್ನು ನೀರಿನ ಮೇಲ್ಪದರ ಅಥವಾ ಒಳಗಡೆಯಿಂದ ಹಾರಿಸಲಾಗುತ್ತದೆ. ನಿರ್ದೇಶಿತ ಗುರಿಗೆ ಅಪ್ಪಳಿಸಿದಾಗ ಇಲ್ಲವೇ ಅವುಗಳ ಸಮೀಪ ಹೋದಾಗ ಈ ಸಿಡಿತಲೆಗಳು ಸ್ಫೋಟಗೊಳ್ಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT