ನವದೆಹಲಿ: ಅಂತರರಾಷ್ಟ್ರೀಯ ಮಾನವೀಯ ಕಾಯ್ದೆಗೆ ಬದ್ಧರಾಗಿರಬೇಕು ಎಂದು ಇಸ್ರೇಲ್‌ಗೆ ಒತ್ತಾಯಿಸಿರುವ ಭಾರತ, ಇದೇ ಮೊದಲ ಬಾರಿಗೆ, ಪಶ್ಚಿಮ ಏಷ್ಯಾದಲ್ಲಿ ಈಗ ಮೂಡಿರುವ ಬಿಕ್ಕಟ್ಟಿಗೆ ಹಮಾಸ್ ಕೂಡಾ ಕಾರಣ ಎಂದು ಹೇಳಿದೆ.
ಪಶ್ಚಿಮ ಏಷ್ಯಾದ ಬಿಕ್ಕಟ್ಟು ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ರಿಷಿ ಅವರು ದೂರವಾಣಿಯಲ್ಲಿ ಚರ್ಚಿಸಿದ್ದು, ಅದರ ಹಿಂದೆಯೇ ವಿದೇಶಾಂಗ ಸಚಿವಾಲಯ ಈ ಸಂಬಂಧ ಹೇಳಿಕೆ ನೀಡಿದೆ.
ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಇಸ್ರೇಲ್ ವಿದೇಶಾಂಗ ಸಚಿವರು ಶನಿವಾರ ಚರ್ಚಿಸಿದರು. ಆಗ, ಭಯೋತ್ಪಾದನೆ ನಿಗ್ರಹದಲ್ಲಿ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ್ದು, ಇಸ್ರೇಲ್‌ನಲ್ಲಿ ನಡೆದ ಉಗ್ರರ ದಾಳಿ ದಿಗ್ಭ್ರಮೆ ಮೂಡಿಸಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.