ಬರ್ಲಿನ್ (ಪಿಟಿಐ): ‘ಭಾರತವು ತನ್ನ ಕಾರ್ಯತಂತ್ರದ ಭಾಗವಾಗಿ ಜರ್ಮನಿ ಜೊತೆಗೆ ದ್ವಿಪಕ್ಷೀಯ ಪಾಲುದಾರಿಕೆಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲು ಬಯಸುತ್ತದೆ’ ಎಂದು ಜರ್ಮನ್ ಛಾನ್ಸೆಲರ್ ಫ್ರಿಡ್ರಿಚ್ ಮೆರ್ಝ್ ಅವರಿಗೆ ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ.

ನೆದರ್ಲೆಂಡ್ಸ್, ಡೆನ್ಮಾರ್ಕ್ ಮತ್ತು ಜರ್ಮನಿ ದೇಶಗಳ ಪ್ರವಾಸ ಕೈಗೊಂಡಿರುವ ಅವರು ಬರ್ಲಿನ್ನಲ್ಲಿ ಭೇಟಿಯಾಗಿ ಈ ವಿಷಯ ಪ್ರಸ್ತಾಪಿಸಿದ್ದಾರೆ.

‘ಬರ್ಲಿನ್ನಲ್ಲಿ ಛಾನ್ಸೆಲರ್ ಫ್ರಿಡ್ರಿಚ್ ಮೆರ್ಝ್ ಅವರನ್ನು ಭೇಟಿಯಾದೆ. ಪ್ರಧಾನಿ ನರೇಂದ್ರ ಮೋದಿ ಪರವಾಗಿ ಶುಭ ಹಾರೈಸಿದೆ. ಜರ್ಮನಿ ಜೊತೆಗೆ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲು ಭಾರತ ಎದುರು ನೋಡುತ್ತಿದೆ. ಭಯೋತ್ಪಾದನೆಯ ವಿರುದ್ಧ ಹೋರಾಟದಲ್ಲಿ ಜರ್ಮನಿಯು ಒಗ್ಗಟ್ಟು ವ್ಯಕ್ತಪಡಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು’ ಎಂದು ಜೈಶಂಕರ್ ಅವರು ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.

ಭೇಟಿ ವೇಳೆ ಜರ್ಮನಿಯ ಹಣಕಾಸು ಹಾಗೂ ಇಂಧನ ಸಚಿವೆ ಕ್ಯಾಥರಿನಾ ರಯೆಸಾ ಅವರನ್ನು ಜೈಶಂಕರ್ ಭೇಟಿಯಾದರು.

ಜರ್ಮನಿಯ ಸಂಸದರ ಜೊತೆಗೆ ಗುರುವಾರ ಸಂವಾದ ನಡೆಸಿದ್ದ ಜೈಶಂಕರ್, ‘ಎಲ್ಲ ಮಾದರಿಯ ಭಯೋತ್ಪಾದನೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಭಾರತ ಬದ್ಧವಾಗಿದೆ’ ಎಂದು ಈ ವೇಳೆ ಮನವರಿಕೆ ಮಾಡಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.