ಅಹಮದಾಬಾದ್: ಮುಂದಿನ ಲೋಕಸಭಾ ಚುನಾವಣೆ ಬಳಿಕ ಭಾರತ ದುರ್ಬಲ ಪ್ರಧಾನಿ ಮತ್ತು ಕಿಚಡಿ ಅಥವಾ ಬಹುಪಕ್ಷಗಳ ಸರ್ಕಾರವನ್ನು ಹೊಂದಬೇಕು. ಹೀಗಾದಾಗ ಮಾತ್ರ ಸಮಾಜದ ದುರ್ಬಲ ವರ್ಗಗಳು ಪ್ರಯೋಜನ ಪಡೆಯಲು ಸಾಧ್ಯ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಬಲ ಪ್ರಧಾನಿ ಪ್ರಬಲರಿಗೆ, ಸಿರಿವಂತರಿಗೆ ಮಾತ್ರ ನೆರವಾಗುತ್ತಾರೆ ಎಂದು ಹೇಳಿದರು.ಜವಾಹರ್ ಲಾಲ್ ನೆಹರೂ ಬಳಿಕ ಅತ್ಯಂತ ಪ್ರಬಲ ಪ್ರಧಾನಿ ಎನಿಸಿಕೊಂಡವರು ನಿರುದ್ಯೋಗ, ಹಣದುಬ್ಬರ, ಚೀನಾ ಅತಿಕ್ರಮಣ, ಕೈಗಾರಿಕೋದ್ಯಮಿಗಳ ಬ್ಯಾಂಕ್ ಸಾಲ ಮನ್ನಾ ಬಗ್ಗೆ ಪ್ರಶ್ನಿಸಿದರೆ ವ್ಯವಸ್ಥೆಯನ್ನು ದೂರುತ್ತಾರೆ ಎಂದು ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಇದೇ ವೇಳೆ ಆಮ್ ಆದ್ಮಿ ಪಕ್ಷದ (ಎಎಪಿ) ವಿರುದ್ಧ ವಾಗ್ದಾಳಿ ನಡೆಸಿದ ಓವೈಸಿ, ಗುಜರಾತ್‌ನ ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೂ ಎಎಪಿಗೂ ಯಾವುದೇ ವ್ಯತ್ಯಾಸ ಇಲ್ಲ. ಬಿಲ್ಕಿಸ್ ಬಾನು ಪ್ರಕರಣದ ದೋಷಿಗಳನ್ನು ಬಿಡುಗಡೆ ಮಾಡಿರುವ ಬಗ್ಗೆ ಎಎಪಿ ಮೌನಕ್ಕೆ ಶರಣಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿಸೆಂಬರ್ ವೇಳೆಗೆ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಎಐಎಂಐಎಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.