ನವದೆಹಲಿ: ಜಲಾಂತರ್ಗಾಮಿಗಳನ್ನು ಪತ್ತೆ ಮಾಡುವ ಮತ್ತು ರಕ್ಷಣಾ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸುವ ಅಮೆರಿಕ ನಿರ್ಮಿತ, ’ಎಂಎಚ್–60 ರೋಮಿಯೊ-ಸೀಹಾಕ್' ಹೆಸರಿನ ಎರಡು ಹೆಲಿಕಾಪ್ಟರ್‌ಗಳು ಶುಕ್ರವಾರ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿವೆ.

ವಿವಿಧೋದ್ದೇಶದ 24 ಹೆಲಿಕಾಪ್ಟರ್‌ಗಳನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ಒಪ್ಪಿತ್ತು. ಅದರಂತೆ ಶುಕ್ರವಾರ ಮೊದಲ ಎರಡು ಹೆಲಿಕಾಪ್ಟರ್‌ಗಳನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರ ಮಾಡಲಾಗಿದೆ.

ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಅಮೆರಿಕ ನೌಕಾ ವಾಯುಪಡೆ, ‘ಉತ್ತರ ಐಲ್ಯಾಂಡ್‌ನ ಅಮೆರಿಕ ನೌಕಾ ವಾಯುನೆಲೆಯಲ್ಲಿ ಇಂದು ನಡೆದ ಸಮಾರಂಭದಲ್ಲಿ ಭಾರತೀಯ ನೌಕಾಪಡೆಯು ಅಮೆರಿಕದಿಂದ ಮೊದಲ ಎರಡು ಎಂಎಚ್-60 ರೋಮಿಯೊ– ಸೀಹಾಕ್‘ಗಳನ್ನು ಪಡೆದುಕೊಂಡಿದೆ ಎಂದು ಹೇಳಿದೆ.

‘ಅಮೆರಿಕದೊಂದಿಗಿನ ಒಪ್ಪಂದದಲ್ಲಿ ಭಾರತೀಯ ನೌಕಾಪಡೆಯು ಒಟ್ಟು 24 ಹೆಲಿಕಾಪ್ಟರ್‌ಗಳನ್ನು ಸ್ವೀಕರಿಸಲಿದೆ. ಇದು ಅಮೆರಿಕ ಮತ್ತು ಭಾರತೀಯ ನೌಕಾಪಡೆಗಳ ನಡುವಿನ ಸಹಕಾರವನ್ನು ಹೆಚ್ಚಿಸುತ್ತದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ನಮ್ಮ ಸಂಯೋಜಿತ ಯುದ್ಧ ಸಾಮರ್ಥ್ಯವನ್ನು ಬಲಪಡಿಸುತ್ತದೆ,‘ ಎಂದು ಮತ್ತೊಂದು ಟ್ವೀಟ್‌ನಲ್ಲಿ ಅಮೆರಿಕ ನೌಕಾ ವಾಯುಪಡೆ ವಿಶ್ವಾಸ ವ್ಯಕ್ತಪಡಿಸಿದೆ.

ಜಲಾಂತರ್ಗಾಮಿಗಳನ್ನು ಬೇಟೆಯಾಡುವ ಮತ್ತು ಹಡಗುಗಳ ಮೇಲೆ ದಾಳಿ ನಡೆಸಲು ಹಾಗೂ ಸಮುದ್ರದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಈ ಹೆಲಿಕಾಪ್ಟರ್‌ಗಳನ್ನು ಬಳಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಬ್ರಿಟಿಷ್ ನಿರ್ಮಿತ ‘ಸೀ ಕಿಂಗ್’ ಹೆಲಿಕಾಪ್ಟರ್‌ಗಳಿಗೆ ಪರ್ಯಾಯವಾಗಿ ಕಾರ್ಯನಿರ್ವಹಿಸಲಿವೆ.

₹17,836 ಕೋಟಿಯ ಒಪ್ಪಂದ

24 ಹೆಲಿಕಾಪ್ಟರ್‌ಗಳ ಖರೀದಿ ಒಪ್ಪಂದದ ಒಟ್ಟು ಮೊತ್ತ ₹17,836 ಕೋಟಿ (2.6 ಶತಕೋಟಿ ಡಾಲರ್) ಆಗಿದೆ. ಸೀಹಾಕ್ ಹೆಲಿಕಾಪ್ಟರ್‌ಗಳನ್ನು ಅಮೆರಿಕದ 'ಲಾಕ್‌ಹೀಡ್ ಮಾರ್ಟಿನ್’ ನಿರ್ಮಿಸಿದೆ.

ಭಾರತಕ್ಕೆ ಏಕೆ ಅಗತ್ಯ?

ಭಾರತ ಈ ಹೆಲಿಕಾಪ್ಟರ್‌ಗಳನ್ನು ದಶಕದ ಹಿಂದೆಯೇ ಖರೀದಿಸಲು ಆಸಕ್ತಿವಹಿಸಿತ್ತು. ಪ್ರಸ್ತುತ ಸಂದರ್ಭದಲ್ಲಿ ಚೀನಾದ ಆಕ್ರಮಣಕಾರಿ ಧೋರಣೆಯಿಂದಾಗಿ ಭಾರತಕ್ಕೆ ಇಂತಹ ಹೆಲಿಕಾಪ್ಟರ್‌ಗಳನ್ನು ಖರೀದಿಸುವುದು ಅಗತ್ಯವಾಗಿತ್ತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹೆಲಿಕಾಪ್ಟರ್ ವಿಶೇಷತೆ
* ಕಡಲಭದ್ರತೆಗೆ ವಿನ್ಯಾಸಗೊಳಿಸಲಾಗಿರುವ ವಿಶ್ವದ ಅತ್ಯಾಧುನಿಕ ನೌಕಾಪಡೆ ಹೆಲಿಕಾಪ್ಟರ್ ಇದು
* ಹಡಗುಗಳು, ವಿಧ್ವಂಸಕ ನೌಕೆಗಳು ಮತ್ತು ಯುದ್ಧನೌಕೆಗಳಿಂದ ಕಾರ್ಯಾಚರಣೆ ಕೈಗೊಳ್ಳುವಂತೆ ವಿನ್ಯಾಸ
* ಪ್ರಸ್ತುತ ಅಮೆರಿಕ ನೌಕಾಪಡೆಯಲ್ಲಿ ಜಲಾಂತರ್ಗಾಮಿ ನಿಗ್ರಹಕ್ಕೆ ಬಳಕೆ
* ಜಲಾಂತರ್ಗಾಮಿಗಳ ಮೇಲೆ ಯುದ್ಧ, ಸರ್ವೇಕ್ಷಣೆ, ಸಂವಹನ, ಶೋಧ ಮತ್ತು ರಕ್ಷಣಾ ಕಾರ್ಯ, ಸರಕು ಸಾಗಾಟಕ್ಕೆ ಬಳಸಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.