ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಿಕಾ ಸ್ವಾತಂತ್ರ್ಯ: ಭಾರತಕ್ಕೆ 150ನೇ ಸ್ಥಾನ

Last Updated 4 ಮೇ 2022, 19:31 IST
ಅಕ್ಷರ ಗಾತ್ರ

ನವದೆಹಲಿ: ‘ರಿಪೋರ್ಟರ್ಸ್‌ ವಿದೌಟ್‌ ಬಾರ್ಡರ್ಸ್‌’ ಸಂಸ್ಥೆ ಸಿದ್ಧಪಡಿಸಿರುವ 2022ನೇ ಸಾಲಿನ 180 ರಾಷ್ಟ್ರಗಳ ‘ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ’ದಲ್ಲಿ ಭಾರತ 150ನೇ ಸ್ಥಾನಪಡೆದಿದೆ. ಕಳೆದ ಬಾರಿ 142ನೇ ಸ್ಥಾನದಲ್ಲಿದ್ದ ಭಾರತ, ಈ ಬಾರಿ ಎಂಟು ಸ್ಥಾನಗಳ ಕುಸಿತ ಕಂಡಿದೆ.

ನೇಪಾಳ ಹೊರತುಪಡಿಸಿ ಭಾರತದ ನೆರೆಯ ರಾಷ್ಟ್ರಗಳ ಶ್ರೇಯಾಂಕದಲ್ಲೂ ಕುಸಿತ ದಾಖಲಾಗಿದೆ. ಶ್ರೀಲಂಕಾ 146,ಪಾಕಿಸ್ತಾನ 157, ಬಾಂಗ್ಲಾದೇಶ 162 ಹಾಗೂ ಮ್ಯಾನ್ಮಾರ್‌ 176ನೇ ಸ್ಥಾನದಲ್ಲಿವೆ ಎಂದು ಸಂಸ್ಥೆಯು ಮಂಗಳವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.

ಕಳೆದ ಬಾರಿ 106ನೇ ಸ್ಥಾನದಲ್ಲಿದ್ದ ನೇಪಾಳ ಈ ಬಾರಿ 76ನೇ ಸ್ಥಾನಕ್ಕೆ ಏರಿದೆ. ಕಳೆದ ಬಾರಿ ಶ್ರೀಲಂಕಾ 127, ಮ್ಯಾನ್ಮಾರ್‌ 140, ಪಾಕಿಸ್ತಾನ 145, ಬಾಂಗ್ಲಾದೇಶ 152ನೇ ಸ್ಥಾನದಲ್ಲಿದ್ದವು.

ಈ ವರ್ಷ, ನಾರ್ವೆ (1) ಡೆನ್ಮಾರ್ಕ್ (2), ಸ್ವೀಡನ್ (3) ಎಸ್ಟೋನಿಯಾ (4) ಮತ್ತು ಫಿನ್ಲೆಂಡ್‌ (5) ಉನ್ನತ ಸ್ಥಾನಗಳನ್ನು ಪಡೆದುಕೊಂಡಿದ್ದು, ಉತ್ತರ ಕೊರಿಯಾ ಕೊನೆಯ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT