ನವದೆಹಲಿ: ಚೀನಾದ ಅತಿಕ್ರಮಣಕಾರಿ ಧೋರಣೆ ಕುರಿತು ಆತಂಕ ವ್ಯಕ್ತಪಡಿಸಿರುವ ತೈವಾನ್‌ನ ರಾಯಭಾರಿ ಬೌಷುವಾನ್ ಗೆರ್ ಅವರು, ಈ ‘ನಿರಂಕುಶ ಪ್ರಭುತ್ವ’ ಧೋರಣೆಯನ್ನು ತಡೆಯಲು ಭಾರತ–ತೈವಾನ್ ಕೈಜೋಡಿಸಬೇಕಿದೆ ಎಂದು ಪ್ರತಿಪಾದಿಸಿದ್ದಾರೆ.

ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅವರು ಚೀನಾದ ಪೂರ್ವ ಮತ್ತು ದಕ್ಷಿಣ ಭಾಗದ ಕಡಲಿನ ಭಾಗದಲ್ಲಿ ಅಂದರೆ ಹಾಂಗ್‌ಕಾಂಗ್ ಮತ್ತು ಗಾಲ್ವಾನ್ ಕಣಿವೆ ಭಾಗದಲ್ಲಿ ಚೀನಾ ಕೈಗೊಂಡಿರುವ ಚಟುವಟುಕೆಗಳಿಂದಾಗಿ ಈ ವಲಯದಲ್ಲಿ ಬಿಗುವಿನ ಪರಿಸ್ಥಿತಿ ಮೂಡಿದೆ ಎಂದರು.

ಅಮೆರಿಕದ ಜನಪ್ರತಿನಿಧಿಗಳ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ಈ ವರ್ಷದ ಆಗಸ್ಟ್ ತಿಂಗಳಲ್ಲಿ ತೈವಾನ್‌ಗೆ ಭೇಟಿ ನೀಡಿದ ಬಳಿಕ, ಚೀನಾ ಈ ಭಾಗದಲ್ಲಿ ಸೇನಾ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ. ಚೀನಾದಿಂದ ಪ್ರತ್ಯೇಕಗೊಂಡಿರುವ ಪ್ರದೇಶ ತೈವಾನ್ ಎಂದು ಪ್ರತಿಪಾದಿಸಿರುವ ಚೀನಾದ ಆಡಳಿತವು, ಪೆಲೋಸಿ ಪ್ರವಾಸದ ಉದ್ದೇಶ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.