ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ ಸಮಿತಿ ಮರುಚುನಾವಣೆಯಲ್ಲಿ ಭಾರತ ಸ್ಪರ್ಧೆ

Last Updated 4 ಜೂನ್ 2022, 9:40 IST
ಅಕ್ಷರ ಗಾತ್ರ

ನವದೆಹಲಿ:ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ (ಐಟಿಯು) ಸಮಿತಿಗೆ ನಡೆಯಲಿರುವ ಮರುಚುನಾವಣೆಯಲ್ಲಿ ಭಾರತ ಸ್ಪರ್ಧಿಸಲಿದೆ ಎಂದುಕೇಂದ್ರ ಸಂವಹನ ಸಚಿವಾಲಯ ಶನಿವಾರ ಹೇಳಿಕೆ ಬಿಡುಗಡೆ ಮಾಡಿದೆ.

ವಿಶ್ವಸಂಸ್ಥೆಯ ದೂರಸಂಪರ್ಕ ಮಂಡಳಿಯ ಗುರಿಗಳು ಮತ್ತು ಸಂಪರ್ಕಿತ ಸಮುದಾಯಕ್ಕಾಗಿನ ದೃಷ್ಟಿಕೋನದ ಬಗೆಗೆ ಭಾರತ ಹೊಂದಿರುವ ಅಚಲವಾದಬದ್ಧತೆಯನ್ನು ಪ್ರಕಟಣಿಯಲ್ಲಿ ಒತ್ತಿಹೇಳಲಾಗಿದೆ. ಹಾಗೆಯೇ, ಸುಸ್ಥಿರ ಅಭಿವೃದ್ಧಿ ಗುರಿಗಳು–2030 ಅನ್ನು ಸಾಧಿಸಲು ಮಾಹಿತಿ ಮತ್ತು ಸಂಹವನ ತಂತ್ರಜ್ಞಾನಗಳನ್ನು (ಐಸಿಟಿ) ಸಕ್ರಿಯಗೊಳಿಸಲಾಗುವುದು ಎಂಬಸಂವಹನ ಸಚಿವಾಲಯದ ರಾಜ್ಯ ಖಾತೆ ಸಚಿವ ದೇವುಸಿನ್ಹ ಚೌಹಾಣ್‌ ಹೇಳಿಕೆಯನ್ನೂ ಉಲ್ಲೇಖಿಸಲಾಗಿದೆ.

ಚೌಹಾಣ್‌ ಅವರು ಮೇ 31ರಿಂದ ಜೂನ್‌ 3ರ ವರೆಗೆ ಸ್ವಿಟ್ಜರ್‌ಲ್ಯಾಂಡ್‌ನ ಜಿನಿವಾದಲ್ಲಿ ನಡೆದ 'ಮಾಹಿತಿ ಸಮಾಜದ ವಿಶ್ವ ಸಮಾವೇಶ'ದಲ್ಲಿ (ಡಬ್ಲ್ಯೂಎಸ್‌ಐಎಸ್‌) ಮಾತನಾಡಿದ್ದರು.

ಜಾಗತಿಕ ಡಿಜಿಟಲ್‌ ರೂಪಾಂತರ, ಅಭಿವೃದ್ಧಿಯಲ್ಲಿಉತ್ಕೃಷ್ಟತೆ ಕಾಪಾಡಿಕೊಳ್ಳುವುದು ಮತ್ತು ಐಸಿಟಿ ಬಳಿಕೆಯಲ್ಲಿ ಭಾರತವು ಮುಂಚೂಣಿಯಲ್ಲಿದೆ ಎಂದು ಅವರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT