ನವದೆಹಲಿ: ನೆರೆಯ ಬಾಂಗ್ಲಾದೇಶದಲ್ಲಿ ರೈಲ್ವೆ ಪ್ರಯಾಣ ಸೌಲಭ್ಯ ಉತ್ತಮಪಡಿಸಲು 10 ಬ್ರಾಡ್ ಗೇಜ್ ಡೀಸೆಲ್ ರೈಲ್ವೆ ಎಂಜಿನ್ ಅನ್ನು ಭಾರತ ಸೋಮವಾರ ನೀಡಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಎಂಜಿನ್‌ಗಳ ಹಸ್ತಾಂತರ ಸಂದರ್ಭದಲ್ಲಿ ಉಭಯ ದೇಶಗಳ ಪ್ರಮುಖರು ಹಾಜರಿರುವರು. ಕಾರ್ಯಕ್ರಮ ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಯಲಿದೆ ಎಂದು ಇಲಾಖೆಯು ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ.

ಹಾಜರಿರುವ ಪ್ರಮುಖರಲ್ಲಿ ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರು, ರೈಲ್ವೆ ಸಚಿವರು, ರಾಯಭಾರಿಗಳು, ರೈಲ್ವೆ ಮಂಡಳಿ ಅಧ್ಯಕ್ಷರು ಸೇರಿದಂತೆ ಇತರೆ ಅಧಿಕಾರಿಗಳು ಇರುವರು. ಎಂಜಿನ್‌ಗಳ ಹಸ್ತಾಂತರ ಪ್ರಕ್ರಿಯೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಗೆಡೆ ರೈಲ್ವೆ ನಿಲ್ದಾಣದಲ್ಲಿ ನಡೆಯಲಿದೆ. ಬಾಂಗ್ಲಾದೇಶದ ದರ್ಶನಾ ನಿಲ್ದಾಣದಲ್ಲಿ ಇವುಗಳನ್ನು ಸ್ವೀಕರಿಸಲಾಗುತ್ತದೆ.

ಈ ಎಂಜಿನ್‌ಗಳನ್ನು ಪಡೆಯುವ ಸಂಬಂಧ ಬಾಂಗ್ಲಾದೇಶ ಕಳೆದ ಏಪ್ರಿಲ್ ತಿಂಗಳಿನಲ್ಲಿ ಪ್ರಸ್ತಾಪ ಕಳುಹಿಸಿತ್ತು.

ಒಟ್ಟು 3300 ಅಶ್ವಶಕ್ತಿ ಸಾಮರ್ಥ್ಯದ ಡಬ್ಲ್ಯೂಡಿಎಂ3ಡಿ ಎಂಜಿನ್‌ಗಳನ್ನು ಬಾಂಗ್ಲಾದೇಶಕ್ಕೆ ನೀಡಲಾಗಿದ್ದು, ಇವುಗಳ ಬಾಳಿಕೆ ಅವಧಿ 28 ವರ್ಷಗಳಿಗೂ ಅಧಿಕ. ಗಂಟೆಗೆ 120 ಕಿ.ಮೀ ವೇಗದಲ್ಲಿ ಕ್ರಮಿಸುವಂತೆ ಇವುಗಳನ್ನು ವಿನ್ಯಾಸ ಮಾಡಲಾಗಿದೆ. ಪ್ರಯಾಣಿಕ ಮತ್ತು ಸರಕು ಸಾಗಣೆ ರೈಲುಗಳ ಸೇವೆಗೆ ಇದು ಸೂಕ್ತವಾಗಿದೆ ಎಂದು ಇಲಾಖೆಯು ಹೇಳಿಕೆಯಲ್ಲಿ ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.