ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಎಂದು ಮರುನಾಮಕರಣ ಮಾಡುತ್ತೇವೆ: ದಿಲೀಪ್‌ ಘೋಷ್‌

Published 10 ಸೆಪ್ಟೆಂಬರ್ 2023, 15:55 IST
Last Updated 10 ಸೆಪ್ಟೆಂಬರ್ 2023, 15:55 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ‘ದೇಶಕ್ಕೆ ಭಾರತ ಎಂದು ಮರುನಾಮಕರಣ ಮಾಡಲಾಗುವುದು. ಕೋಲ್ಕತ್ತದಲ್ಲಿರುವ ವಿದೇಶಿಯರ ಪ್ರತಿಮೆಗಳನ್ನು ತೆರವುಗೊಳಿಸಲಾಗುವುದು’ ಎಂದು ಪಶ್ಚಿಮ ಬಂಗಾಳದ ಸಂಸದ, ಬಿಜೆಪಿ ರಾಷ್ಟ್ರಘಟಕದ ಮಾಜಿ ಉಪಾಧ್ಯಕ್ಷ ದಿಲೀಪ್ ಘೋಷ್ ಭಾನುವಾರ ಹೇಳಿದ್ದಾರೆ.

ಮೇದಿನಿಪುರ ಲೋಕಸಭಾ ಕ್ಷೇತ್ರದ ಖರಗ್‌ಪುರನಲ್ಲಿ ನಡೆದ 'ಚಾಯ್ ಪೆ ಚರ್ಚಾ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಕೋಲ್ಕತ್ತದಲ್ಲಿರುವ ವಿದೇಶಿಯರ ಎಲ್ಲಾ ಪ್ರತಿಮೆಗಳನ್ನು ತೆರವು ಮಾಡಲಾಗುವುದು' ಎಂದು ಹೇಳಿದರು.

ಬಿಜೆಪಿ ನಾಯಕ ರಾಹುಲ್ ಸಿನ್ಹಾ, ‘ಒಂದು ದೇಶಕ್ಕೆ ಎರಡು ಹೆಸರುಗಳು ಇರಬಾರದು. ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ವಿಶ್ವ ನಾಯಕರು ನವದೆಹಲಿಗೆ ಆಗಮಿಸಿದ್ದು, ದೇಶದ ಮರುನಾಮಕರಣಕ್ಕೆ ಇದು ಸಕಾಲ’ ಎಂದು ಹೇಳಿದರು. 

ಬಿಜೆಪಿ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡಿರುವ ತೃಣಮೂಲ ಕಾಂಗ್ರೆಸ್ ವಕ್ತಾರ ಸಂತನು ಸೇನ್, ‘ಪ್ರತಿಪಕ್ಷ ‘ಐಎನ್‌ಡಿಐಎ’ ಮೈತ್ರಿಗೆ ಹೆದರಿರುವ ಬಿಜೆಪಿ, ನಿಜವಾದ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಹೀಗೆಲ್ಲ ಮಾಡುತ್ತಿದೆ‘ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT