ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

2025ರೊಳಗೆ ದೇಶದಲ್ಲಿ ವಿಶ್ವದ ಅತಿ ದೊಡ್ಡ ವಸ್ತುಸಂಗ್ರಹಾಲಯ ನಿರ್ಮಾಣ: ಶೇಖಾವತ್‌

Published 30 ಜೂನ್ 2024, 23:51 IST
Last Updated 30 ಜೂನ್ 2024, 23:51 IST
ಅಕ್ಷರ ಗಾತ್ರ

ಜೋಧಪುರ: ‘ಭಾರತದ 5 ಸಾವಿರ ವರ್ಷಗಳ ಇತಿಹಾಸವನ್ನು ಸಾರುವ ವಿಶ್ವದ ಅತಿ ದೊಡ್ಡ ವಸ್ತುಸಂಗ್ರಹಾಲಯವನ್ನು 2025ರ ಒಳಗೆ ನಿರ್ಮಿಸಲಾಗುವುದು. ಈ ಬಗ್ಗೆ ಭಾರತ ಹಾಗೂ ಫ್ರಾನ್ಸ್‌ ನಡುವೆ ಒಪ್ಪಂದ ಏರ್ಪಟ್ಟಿದೆ’ ಎಂದು ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರು ಭಾನುವಾರ ಹೇಳಿದರು.

‘ಫ್ರಾನ್ಸ್‌ನಲ್ಲಿರುವ ಲೂವರ್‌ ವಸ್ತುಸಂಗ್ರಹಾಲಯವು ವಿಶ್ವದ ಅತಿ ದೊಡ್ಡ ವಸ್ತುಸಂಗ್ರಹಾಲಯವಾಗಿದೆ. ಇದಕ್ಕೂ ಎರಡು ಪಟ್ಟು ವಿಸ್ತಾರವಾದುದ್ದನ್ನು ಭಾರತದಲ್ಲಿ ನಿರ್ಮಿಸಲಾಗುವುದು. ಸೆಂಟ್ರಲ್‌ವಿಸ್ತಾ ಮರುಅಭಿವೃದ್ಧಿ ಕಾರ್ಯವು ಮುಕ್ತಾಯಗೊಂಡ ಬಳಿಕ, ದೆಹಲಿಯ ರಯಸೀನಾ ಹಿಲ್ಸ್‌ನಲ್ಲಿರುವ ಉತ್ತರ ಹಾಗೂ ದಕ್ಷಿಣ ಬ್ಲಾಕ್‌ಗಳನ್ನು ವಸ್ತುಸಂಗ್ರಹಾಲಯವನ್ನಾಗಿ ನಿರ್ಮಿಸಲಾಗುವುದು’ ಎಂದು ಸಚಿವ ಶೇಖಾವತ್‌ ತಿಳಿಸಿದರು.

‘ವಿಶ್ವ ಪರಂಪರೆ ಸಮಿತಿಯ ಸಭೆಯು ಇದೇ ಮೊದಲ ಬಾರಿಗೆ ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿದೆ. ಅತಿ ಹೆಚ್ಚು ವಿಶ್ವ ಪಾರಂಪರಿಕ ಸ್ಥಳಗಳಿರುವ ಮೂರನೇ ದೇಶವಾಗಿರುವ ಭಾರತವು ಮುಂದಿನ ದಿನಗಳಲ್ಲಿ ಇನ್ನಷ್ಟು ಪಾರಂಪರಿಕ ಸ್ಥಳಗಳನ್ನು ಹೊಂದಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT