ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸಾಂತ್ಯಕ್ಕೆ ಇನ್ನೂ ಮೂರು ರಫೇಲ್‌ ಭಾರತಕ್ಕೆ: ವಾಯುಪಡೆ ಮುಖ್ಯಸ್ಥ

Last Updated 23 ಜನವರಿ 2021, 16:35 IST
ಅಕ್ಷರ ಗಾತ್ರ

ಜೋಧ್‌ಪುರ: ‘ಈಗಾಗಲೇ ಎಂಟು ರಫೇಲ್‌ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸಿದ್ದು, ಇನ್ನೂ ಮೂರು ಯುದ್ಧವಿಮಾನಗಳು ಮಾಸಾಂತ್ಯದೊಳಗೆ ಬರುವ ಸಾಧ್ಯತೆ ಇದೆ’ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ರಾಕೇಶ್‌ ಕುಮಾರ್‌ ಸಿಂಗ್‌ ಭದೌರಿಯಾ ಶನಿವಾರ ಹೇಳಿದರು.

ಭಾರತೀಯ ವಾಯುಪಡೆ (ಐಎಎಫ್‌) ಹಾಗೂ ಫ್ರಾನ್ಸ್‌ನ ವಾಯುಪಡೆ ಜಂಟಿಯಾಗಿ ನಡೆಸಿದ ವೈಮಾನಿಕ ಕವಾಯತು ‘ಡೆಸರ್ಟ್‌ ನೈಟ್‌–21’ ಸಮಾರೋಪದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಜೊತೆಗೆ ಐದನೇ ಜನರೇಷನ್‌ ಯುದ್ಧ ವಿಮಾನ ಯೋಜನೆಯನ್ನು ಐಎಎಫ್‌ ಆರಂಭಿಸಿದ್ದು, ಯುದ್ಧ ವಿಮಾನಗಳಲ್ಲಿ ಆರನೇ ಜನರೇಷನ್‌ ಸಾಮರ್ಥ್ಯವನ್ನೂ ಅಳವಡಿಸುವ ಯೋಜನೆ ಇದೆ. ಪ್ರಸ್ತುತ ನಮ್ಮ ಬಳಿ ಇರುವ ಆಧುನಿಕ ಯುದ್ಧ ವಿಮಾನಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಸೆನ್ಸರ್‌ಗಳನ್ನು ಅಳವಡಿಸುವುದು ಗುರಿಯಾಗಿದೆ’ ಎಂದರು.

‘ರಫೇಲ್‌ ಯುದ್ಧ ವಿಮಾನಗಳು ಬಂದ ಸಂದರ್ಭದಲ್ಲಿ ಅವುಗಳನ್ನು ಮೊದಲು ಕಾರ್ಯಾಚರಣೆಗೆ ಸಜ್ಜುಗೊಳಿಸುವುದು ನಮ್ಮ ಆದ್ಯತೆ ಆಗಿತ್ತು. ಈಗಾಗಲೇ ಇದನ್ನು ನಾವು ಸಾಧಿಸಿದ್ದು, ಡೆಸರ್ಟ್‌ ನೈಟ್‌ನಲ್ಲಿ ರಫೇಲ್‌ ಕವಾಯತು ಇದರ ಫಲಿತಾಂಶ. ಮುಂದಿನ ವರ್ಷಾಂತ್ಯದೊಳಗೆ ಎಲ್ಲ ರಫೇಲ್‌ ಯುದ್ಧ ವಿಮಾನಗಳು ಪೂರೈಕೆ ಆಗಲಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT