ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಅಗ್ನಿವೀರ್ ಅಕ್ಷಯ್ ಸಿಯಾಚಿನ್‌ನಲ್ಲಿ ಸಾವು: ಭಾರತೀಯ ಸೇನೆಯಿಂದ ಶ್ರದ್ಧಾಂಜಲಿ

Published 22 ಅಕ್ಟೋಬರ್ 2023, 7:53 IST
Last Updated 22 ಅಕ್ಟೋಬರ್ 2023, 7:53 IST
ಅಕ್ಷರ ಗಾತ್ರ

ನವದೆಹಲಿ: ಸಿಯಾಚಿನ್‌ ಯುದ್ಧ ಭೂಮಿಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಮೊದಲ ಅಗ್ನಿವೀರ್ ಗವಟೆ ಅಕ್ಷಯ್ ಲಕ್ಷ್ಮಣ್ ಹುತಾತ್ಮರಾಗಿದ್ದು, ಅವರಿಗೆ ಭಾರತೀಯ ಸೇನೆ ಇಂದು (ಭಾನುವಾರ) ಶ್ರದ್ಧಾಂಜಲಿ ಸಲ್ಲಿಸಿದೆ.

ಭಾರತೀಯ ಸೇನೆಯ ಫೈರ್‌ ಆ್ಯಂಡ್‌ ಫ್ಯೂರಿ ಕಾರ್ಪ್ಸ್‌ ಮೃತ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದೆ.

ಅಕ್ಷಯ್ ಲಕ್ಷ್ಮಣ್ ಅವರ ತ್ಯಾಗಕ್ಕೆ ವಂದನೆ ಸಲ್ಲಿಸುತ್ತೇವೆ. ಈ ದುಃಖದ ಸಮಯದಲ್ಲಿ ಕುಟುಂಬದೊಂದಿಗೆ ನಾವು ದೃಢವಾಗಿ ನಿಲ್ಲುತ್ತೇವೆ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಭಾರತೀಯ ಸೇನೆ ಪೋಸ್ಟ್ ಮಾಡಿದೆ.

ಸಿಯಾಚಿನ್‌ನಲ್ಲಿ ಜೂನ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಓರ್ವ ಸೇನಾ ಯೋಧ ಮೃತಪಟ್ಟರೆ, ಮೂವರು ಯೋಧರು ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT