19ನೇ ಬಾರಿ ಎವರೆಸ್ಟ್ ಏರಿದ ಬ್ರಿಟಿಷ್ ವ್ಯಕ್ತಿ
ಬ್ರಿಟಿಷ್ ಪರ್ವತಾರೋಹಿ ಕೆಂಟನ್ ಕೂಲ್ (51) ಅವರು 19ನೇ ಬಾರಿಗೆ ಜಗತ್ತಿನ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಏರಿದ್ದಾರೆ. ಈ ಮೂಲಕ ಅತಿ ಹೆಚ್ಚು ಬಾರಿ ಎವರೆಸ್ಟ್ ಏರಿದ ಶೆರ್ಪಾ ಗೈಡ್ ಅಲ್ಲದ ವ್ಯಕ್ತಿ ಎಂಬ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. ಮಂಗಳವಾರ ವಾಪಸ್ ಆದ ಬಳಿಕ ಮಾತನಾಡಿದ ಕೆಂಟನ್ ಅವರು ‘ನನಗೀಗ 51 ವರ್ಷ. 2004ರಿಂದಲೂ ಎವರೆಸ್ಟ್ ಏರುತ್ತಿದ್ದೇನೆ. ಮುಂದಿನ ವರ್ಷವೂ ಎವರೆಸ್ಟ್ ತುತ್ತತುದಿ ತಲುಪುತ್ತೇನೆ. ನಂತರ ನೇಪಾಳದ ಇತರ ಶಿಖರಗಳನ್ನು ಹತ್ತುತ್ತೇನೆ’ ಎಂದು ತಿಳಿಸಿದರು.