ನವದೆಹಲಿ: ಭಾರತದ ಆರ್ಥಿಕತೆ ಐಸಿಯುನಲ್ಲಿದೆ. ಭಾರತೀಯರೆಲ್ಲರಿಗೂ ತಿಳಿದ ವಿಚಾರ ಇದಾಗಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಇಂದು (ಶುಕ್ರವಾರ) ಹೇಳಿದ್ದಾರೆ.

ಸಂಸತ್ ಆವರಣದಲ್ಲಿ ಪಿಟಿಐಗೆ ಪ್ರತಿಕ್ರಿಯಿಸಿದ ಮಹುವಾ, 'ಈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಶೇ 25ಕ್ಕಿಂತ ಹೆಚ್ಚು ಯುವಜನತೆ ನಿರುದ್ಯೋಗದಿಂದ ಬಳಲುತ್ತಿದ್ದಾರೆ. ಪತ್ರಿಕಾ ಸ್ವಾತಂತ್ರ್ಯ, ಉತ್ಪಾದನೆಯಂತಹ ಜಾಗತಿಕ ಸೂಚ್ಯಂಕದಲ್ಲೂ ನಿರಂತರ ಕುಸಿತು ಕಾಣುತ್ತಿದೆ' ಎಂದು ಹೇಳಿದ್ದಾರೆ.

'ನಾವು ಇದನ್ನು ಬಹಳ ಸಮಯದಿಂದ ಹೇಳುತ್ತಲೇ ಬಂದಿದ್ದೇವೆ. ಭಾರತದ ಆರ್ಥಿಕತೆ ಐಸಿಯುನಲ್ಲಿದೆ. ಆದರೆ ವಿರೋಧ ಪಕ್ಷಗಳು ಅದನ್ನು ಹೇಳಿದಾಗ ರಾಷ್ಟ್ರ ವಿರೋಧಿಗಳಾಗುತ್ತಾರೆ. ಈಗ ಪ್ರಧಾನಿ ಅವರ ಆಪ್ತ ಸ್ನೇಹಿತನೇ ಇದನ್ನು ಹೇಳಿದ್ದಾರೆ. ಹಾಗಾಗಿ ಈಗಾಲಾದರೂ ಪ್ರಧಾನಿ ಈ ಬಗ್ಗೆ ಹೆಚ್ಚಿನ ಗಮನ ವಹಿಸುವ ನಿರೀಕ್ಷೆಯಿದೆ' ಎಂದು ಹೇಳಿದ್ದಾರೆ.

ಭಾರತದ ವಿರುದ್ಧ ಅಮೆರಿಕದ ಅಧ್ಯಕ್ಷರು ಹೇಳಿಕೆ ನೀಡಿರುವುದು ಮತ್ತು ಸುಂಕ ಹಾಗೂ ದಂಡ ಪ್ರಹಾರ ಮಾಡಿರುವುದು ನಿಜಕ್ಕೂ ಅವಮಾನಕರ ಎಂದು ಅವರು ಹೇಳಿದ್ದಾರೆ.
.ಭಾರತದ್ದು 'ಸತ್ತ' ಆರ್ಥಿಕತೆ; ರಾಹುಲ್ ನಿಲುವನ್ನು ಒಪ್ಪಿಕೊಳ್ಳದ ತರೂರ್.ದೇಶದ ಆರ್ಥಿಕತೆ ಸತ್ತಿರುವುದು ಸತ್ಯ: ರಾಹುಲ್ ಗಾಂಧಿ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.