ನವದೆಹಲಿ: ಕ್ಷಿಪಣಿ ಧ್ವಂಸಕ ಐಎನ್ಎಸ್ ಸೂರತ್ ಯುದ್ಧನೌಕೆಯಿಂದ ಮಧ್ಯಮ ಶ್ರೇಣಿಯ ನೆಲದಿಂದ ಆಕಾಶಕ್ಕೆ ಚಿಮ್ಮುವ (ಸರ್ಫೇಸ್ ಟು ಏರ್) ಕ್ಷಿಪಣಿಯನ್ನು ಯಶಸ್ವಿ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.

ಈ ಕ್ಷಿಪಣಿಯು ಸುಮಾರು 70 ಕಿ.ಮೀ. ವ್ಯಾಪ್ತಿಯನ್ನು ಹೊಂದಿರುತ್ತದೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಭಾರತೀಯ ನೌಕಪಡೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊವನ್ನು ಹಂಚಿಕೊಂಡಿದೆ.

ಸ್ವದೇಶಿ ಮಾರ್ಗದರ್ಶಿ ಐಎನ್ಎಸ್ ಸೂರತ್ ಯುದ್ಧನೌಕೆಯಿಂದ ಕ್ಷಿಪಣಿ ನಿಖರ ಗುರಿ ಸಾಧಿಸುವುದರೊಂದಿಗೆ ಭಾರತವು ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲವೃದ್ಧಿಸಿಕೊಂಡಿದೆ ಎಂದು ಹೇಳಿದೆ.

ಆತ್ಮನಿರ್ಭರ ಭಾರತದ ಈ ಸಾಧನೆಯು ದೇಶೀಯವಾಗಿ ಯುದ್ಧನೌಕೆ ವಿನ್ಯಾಸ, ಅಭಿವೃದ್ಧಿ ಮತ್ತು ಕಾರ್ಯಾಚರಣೆಗಳಲ್ಲಿ ಭಾರತದ ಶಕ್ತಿ ಪ್ರದರ್ಶಿಸುತ್ತದೆ. ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆಯತ್ತ ದೇಶದ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದು ಹೇಳಿದೆ.
.Explainer: 1960ರ ಸಿಂಧೂ ಜಲ ಒಪ್ಪಂದ ಅಮಾನತು; ಪಾಕ್ ಮೇಲೆ ಪರಿಣಾಮ ಏನು?.ಉಗ್ರರಿಗೆ ಕಲ್ಪನೆಗೂ ಮೀರಿದ ಶಿಕ್ಷೆ: ಪ್ರಧಾನಿ ಮೋದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.