ನವದೆಹಲಿ: ಯಮೆನ್ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷ ಪ್ರಿಯಾ ಅವರಿಗೆ ‘ತಕ್ಷಣದ ಅಪಾಯವಿಲ್ಲ’ ಎಂದು ಅರ್ಜಿದಾರ ಸಂಘಟನೆಯು ಸುಪ್ರೀಂ ಕೋರ್ಟ್ಗೆ ಗುರುವಾರ ತಿಳಿಸಿದೆ. ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಎಂಟು ವಾರ ಮುಂದೂಡಿದೆ.

ನಿಮಿಷ ಅವರಿಗೆ ಕಾನೂನು ನೆರವು ನೀಡುತ್ತಿರುವ ‘ಸೇವ್ ನಿಮಿಷ ಪ್ರಿಯಾ ಇಂಟರ್ನ್ಯಾಷನಲ್ ಆಕ್ಷನ್ ಕೌನ್ಸಿಲ್’ ಪರ ವಕೀಲರು, ಅರ್ಜಿಯ ವಿಚಾರಣೆಯನ್ನು ಮುಂದೂಡುವಂತೆ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠಕ್ಕೆ ಮನವಿ ಮಾಡಿದರು.

2017ರಲ್ಲಿ ತನ್ನ ವ್ಯವಹಾರ ಪಾಲುದಾರ, ಯಮನ್ ಪ್ರಜೆಯನ್ನು ಕೇರಳದ ಪಾಲಕ್ಕಾಡ್ನ ನಿಮಿಷ ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಅವರನ್ನು ರಕ್ಷಿಸಲು ರಾಜತಾಂತ್ರಿಕ ಮಾರ್ಗಗಳನ್ನು ಬಳಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ.
.ನಿಮಿಷ ಪ್ರಿಯಾ ಪ್ರಕರಣ | ಕೇರಳ ಪಾದ್ರಿ ನೀಡುತ್ತಿರುವ ಮಾಹಿತಿ ಸುಳ್ಳು: ಕೇಂದ್ರ.ಮರಣದಂಡನೆ ರದ್ದಾಗಿದೆ; ನಿಮಿಷ ಪ್ರಿಯಾ ಬಿಡುಗಡೆಯಾಗಲಿದ್ದಾರೆ: ಡಾ. ಕೆ.ಎ. ಪೌಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.