ನವದೆಹಲಿ: ಐಷಾರಾಮಿ ರೈಲು ‘ಗೋಲ್ಡನ್ ಚಾರಿಯಟ್’ ಅನ್ನು ಪುನರಾರಂಭಿಸಲು ಭಾರತೀಯ ರೈಲ್ವೆಯ ಐಆರ್‌ಸಿಟಿಸಿ ವಿಭಾಗವು ನಿರ್ಧರಿಸಿದೆ. ಈ ಋತುವಿನ ಮೊದಲ ಪಯಣ ಇದೇ 14ರಂದು (ಭಾನುವಾರ) ಆರಂಭವಾಗಲಿದೆ.

ಆರು ರಾತ್ರಿ ಮತ್ತು ಏಳು ದಿನಗಳ ಈ ಪಯಣವು ಬೆಂಗಳೂರಿನಿಂದ ಆರಂಭವಾಗಲಿದೆ. ಬಂಡೀಪುರ, ಮೈಸೂರು, ಹಳೆಬೀಡು, ಚಿಕ್ಕಮಗಳೂರು, ಹಂಪಿ, ಐಹೊಳೆ, ಪಟ್ಟದಕಲ್ ಮತ್ತು ಗೋವಾ ಸಂದರ್ಶನದ ಬಳಿಕ ಬೆಂಗಳೂರಿಗೆ ಮರಳಲಿದೆ. ಮೂರು ರಾತ್ರಿ ಮತ್ತು ನಾಲ್ಕು ದಿನಗಳ ಪ್ರವಾಸದ ಇನ್ನೊಂದು ರೈಲು ಇದೇ 21ರಂದು ಬೆಂಗಳೂರಿನಿಂದ ಹೊರಡಲಿದೆ. ಮೈಸೂರು, ಹಂಪಿ ಮತ್ತು ಮಹಾಬಲಿಪುರಂ ಸಂದರ್ಶಿಸುವ ರೈಲು ಬಳಿಕ ಬೆಂಗಳೂರಿಗೆ ಮರಳಲಿದೆ ಎಂದು ಐಆರ್‌ಸಿಟಿಸಿ ತಿಳಿಸಿದೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮಾಲೀಕತ್ವದ ಈ ರೈಲು ಸೇವೆ 2008ರಲ್ಲಿ ಆರಂಭವಾಗಿತ್ತು. 2020ರಲ್ಲಿ ಇದರ ನಿರ್ವಹಣೆಯನ್ನು ಐಆರ್‌ಸಿಟಿಸಿಗೆ ವಹಿಸಲಾಗಿದೆ.

ರೈಲಿನ ವಿನ್ಯಾಸದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ವೈಫೈ, ಒಟಿಟಿ ಸೌಲಭ್ಯ ಅಳವಡಿಸಲಾಗಿದೆ. ಅಂತರರಾಷ್ಟ್ರೀಯ ಮತ್ತು ದೇಶೀಯ ಆಹಾರದ ಆಯ್ಕೆಯೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.