ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಮಾಸ್–ಇಸ್ರೇಲ್ ಯುದ್ಧ | ವಿಶ್ವ ಕೆಡೆಟ್‌ ಚೆಸ್‌: ಹಿಂದೆ ಸರಿದ ಭಾರತ

ಈಜಿಪ್ಟ್‌ನಲ್ಲಿ ನಡೆಯಲಿರುವ ವಿಶ್ವ ಕೆಡೆಟ್ ಚೆಸ್ ಚಾಂಪಿಯನ್‌ಶಿಪ್‌ನಿಂದ ಭಾರತ ತಂಡ ಹಿಂದೆ ಸರಿದಿದೆ.
Published 13 ಅಕ್ಟೋಬರ್ 2023, 10:23 IST
Last Updated 13 ಅಕ್ಟೋಬರ್ 2023, 10:23 IST
ಅಕ್ಷರ ಗಾತ್ರ

ಚೆನ್ನೈ : ಈಜಿಪ್ಟ್‌ನ ಶರ್ಮ್‌–ಎಲ್‌ ಶೇಖ್‌ನಲ್ಲಿ ಅಕ್ಟೋಬರ್‌ 14 ರಿಂದ 23ರವರೆಗೆ ನಡೆಯಲಿರುವ ವಿಶ್ವ ಕೆಡೆಟ್‌ ಚೆಸ್‌ ಚಾಂಪಿಯನ್‌ಷಿಪ್‌ನಿಂದ ಭಾರತ ಹಿಂದೆಸರಿದಿದೆ. ಇಸ್ರೇಲ್‌– ಹಮಾಸ್‌ ನಡುವೆ ಸಂಘರ್ಷದ ಹಿನ್ನೆಲೆಯಲ್ಲಿ ಆಟಗಾರರು ಮತ್ತು ಅಧಿಕಾರಿಗಳ ಸುರಕ್ಷತೆಯ ದೃಷ್ಟಿಯಿಂದ ಭಾರತ ಈ ನಿರ್ಧಾರಕ್ಕೆ ಬಂದಿದೆ.

ಭಾರತದಿಂದ 39 ಆಟಗಾರರು (ಅಧಿಕಾರಿಗಳು, ಕೋಚ್‌ಗಳು ಸೇರಿ ಒಟ್ಟು 80 ಮಂದಿ) ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಬೇಕಿತ್ತು. ಈ ಕೂಟ ನಡೆಯುತ್ತಿರುವ ಜಾಗ, ಇಸ್ರೇಲ್ ಗಡಿಯಿಂದ 400 ಕಿ.ಮೀ. ದೂರದಲ್ಲಿದೆ. ಒಟ್ಟು ಮೂರು ವಿಭಾಗಗಳಲ್ಲಿ 12, 10 ಮತ್ತು ಎಂಟು ವರ್ಷದೊಳಗಿನವರ ವಿಭಾಗಗಳಲ್ಲಿ ಈ ಕೂಟ ನಡೆಯಬೇಕಿತ್ತು.

ಗಾಜಾದಲ್ಲಿ ಯುದ್ಧದ ವಾತಾವರಣ ನೆಲೆಸಿರುವ ಕಾರಣ ಈ ಟೂರ್ನಿಯನ್ನು ಮುಂದೂಡುವಂತೆಯೂ ಅಖಿಲ ಭಾರತ ಚೆಸ್‌ ಫೆಡರೇಷನ್ (ಎಐಸಿಎಫ್‌), ವಿಶ್ವ ಚೆಸ್‌ ಸಂಸ್ಥೆಗೆ (ಫಿಡೆ) ವಿನಂತಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT