ಪಟ್ನಾ: 'ಮತ ಕಳ್ಳತನ' ಆರೋಪ ಸಂಬಂಧ ಚುನಾವಣಾ ಆಯೋಗದ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ಬಿಹಾರದಲ್ಲಿ 'ಮತದಾರರ ಅಧಿಕಾರ ಯಾತ್ರೆ'ಯಲ್ಲಿ ಈ ಕುರಿತು ಪ್ರಸ್ತಾಪಿಸಿರುವ ರಾಹುಲ್, 'ಗಯಾ ಜಿಲ್ಲೆಯಲ್ಲಿ ಬೂತ್ವೊಂದರ ಎಲ್ಲ 947 ಮತದಾರರು ಒಂದೇ ಮನೆಯಲ್ಲಿ ವಾಸವಿರುವುದನ್ನು ತೋರಿಸುತ್ತದೆ' ಎಂದು ಆರೋಪಿಸಿದ್ದಾರೆ.

'ಇಂದೆಂಥ ಜಾದೂ ನೋಡಿ. ಇಡೀ ಗ್ರಾಮದ ಜನರು ಒಂದೇ ಮನೆಯಲ್ಲಿ ವಾಸಿಸುತ್ತಾರೆ' ಎಂದು ರಾಹುಲ್ ಹೇಳಿದ್ದಾರೆ.

ಕಾಂಗ್ರೆಸ್ ಸಹ ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, 'ಬಾರಾಚಟ್ಟಿ ವಿಧಾನಸಭಾ ಕ್ಷೇತ್ರದ ನಿಡಾನಿ ಗ್ರಾಮದಲ್ಲಿ ಒಂದೇ ಬೂತ್ನ ಎಲ್ಲ 947 ಮತದಾರರು ಮನೆ ಸಂಖ್ಯೆ 6ರ ನಿವಾಸಿಗಳಾಗಿದ್ದಾರೆ' ಎಂದು ಹೇಳಿದೆ.

'ಇದು ಕೇವಲ ಒಂದು ಹಳ್ಳಿಯ ವಿಚಾರವಲ್ಲ. ಬಿಹಾರ ಹಾಗೂ ದೇಶದೆಲ್ಲೆಡೆ ಚುನಾವಣಾ ಅಕ್ರಮದ ಪ್ರಮಾಣವನ್ನು ಇದರಿಂದಲೇ ಊಹಿಸಬಹುದಾಗಿದೆ' ಎಂದು ಹೇಳಿದೆ.

ಆರೋಪ ಸಂಬಂಧ ಬಿಹಾರದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು ಸ್ಪಷ್ಟನೆ ನೀಡಿದ್ದು, 'ಗ್ರಾಮ ಅಥವಾ ಕೊಳಗೇರಿಯಲ್ಲಿ ಸರಿಯಾದ ಮನೆ ಸಂಖ್ಯೆ ಇಲ್ಲದವರಿಗೆ ಕಾಲ್ಪನಿಕ ನಂಬರ್ ನೀಡಲಾಗಿದೆ. ಮತದಾರರನ್ನು ಸೇರಿಸುವ ಪ್ರಕ್ರಿಯೆಯನ್ನು ಸರಾಗವಾಗಿಸಲು ಹೀಗೆ ಮಾಡಲಾಗಿದೆ' ಎಂದು ಹೇಳಿದೆ.
.ಪ್ರಧಾನಿ ವಿರುದ್ಧ ನಿಂದನೆ; ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು: ಅಮಿತ್ ಶಾ ಆಗ್ರಹ.ಸಂವಿಧಾನದ ರಕ್ಷಣೆಗಾಗಿ ಜನರು ಮತದಾನದ ಹಕ್ಕನ್ನು ರಕ್ಷಿಸಿಕೊಳ್ಳಬೇಕು: ರಾಹುಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.