ನವದೆಹಲಿ: ಐಎನ್ಎಸ್ ತೀರ್, ಐಎನ್ಎಸ್ ಶಾರ್ದೂಲ್ ಮತ್ತು ಸಿಜಿಎಸ್ ಸಾರಥಿಯನ್ನೊಳಗೊಂಡ ಭಾರತೀಯ ನೌಕಾಪಡೆಯ ಮೊದಲ ತರಬೇತಿ ನಿರತ ಯುದ್ಧನೌಕೆಗಳ ಸಮೂಹವು(1ಟಿಎಸ್) ಸೀಶೆಲ್ಸ್ ದೇಶದ ವಿಕ್ಟೋರಿಯಾ ಬಂದರಿಗೆ ತಲುಪಿದೆ.

ಈ ಯುದ್ಧನೌಕೆಗಳು ಪ್ರಸ್ತುತ ನೈರುತ್ಯ ಹಿಂದೂಮಹಾಸಾಗರದಲ್ಲಿ ದೀರ್ಘ ಶ್ರೇಣಿಯ ತರಬೇತಿಯನ್ನು ನಡೆಸುತ್ತಿವೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.

ಭಾರತದ ನೌಕೆಗಳನ್ನು ಸೀಶೆಲ್ಸ್ ರಕ್ಷಣಾ ಪಡೆಯು ಅದ್ಧೂರಿಯಾಗಿ ಬರಮಾಡಿಕೊಂಡಿದೆ. ಎರಡು ದೇಶಗಳ ನಡುವಿನ ಸಾಗರ ಸಂಬಂಧಿತ ಭಾಂಧವ್ಯಕ್ಕೆ ಇದು ಸಾಕ್ಷಿಯಾಯಿತು.

‘ನೌಕಾಪಡೆಯ ಹಿರಿಯ ಅಧಿಕಾರಿ ಕ್ಯಾಪ್ಟನ್ ತಿಜೋ ಕೆ ಜೋಸೆಫ್ ಅವರು ಸೀಶೆಲ್ಸ್ ಸರ್ಕಾರ ಪ್ರಮುಖರು, ಹಿರಿಯ ಅಧಿಕಾರಿಗಳು ಮತ್ತು ಭಾರತದ ಕಮಿಷನ್ ಜೊತೆ ಮಾತುಕತೆ ನಡೆಸಲಿದ್ದಾರೆ’ ಎಂದು ನೌಕಾಪಡೆಯ ವಕ್ತಾರರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.