ಚೆನ್ನೈ: ಖಾಸಗಿಯಾಗಿ ಅಭಿವೃದ್ಧಿಪಡಿಸಿರುವ ದೇಶದ ಮೊದಲ ರಾಕೆಟ್ ವಿಕ್ರಮ್-ಎಸ್ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಶುಕ್ರವಾರ ಚೆನ್ನೈನಿಂದ 115 ಕಿಮೀ ದೂರದಲ್ಲಿರುವ ಶ್ರೀಹರಿಕೋಟಾದಲ್ಲಿರುವ ತನ್ನ ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣೆ ಮಾಡಲಿದೆ.

ನಾಲ್ಕು ವರ್ಷ ಹಿಂದೆ ಆರಂಭವಾಗಿದ್ದ ಸ್ಟಾರ್ಟಪ್ ಸ್ಕೈರೂಟ್ ಏರೋಸ್ಪೇಸ್ ತನ್ನ ವಿಕ್ರಮ್-ಎಸ್ ರಾಕೆಟ್ನ ಚೊಚ್ಚಲ ಉಡಾವಣೆ ಮಾಡಲು ಸಿದ್ಧವಾಗಿದೆ. ಇದು ದೇಶದ ಬಾಹ್ಯಾಕಾಶ ಉದ್ಯಮಕ್ಕೆ ಖಾಸಗಿ ವಲಯದ ಸೇರ್ಪಡೆಯ ಮುನ್ನುಡಿಯಾಗಲಿದೆ.

2020ರಲ್ಲಿ ಖಾಸಗಿಯವರಿಗೂ ಬಾಹ್ಯಾಕಾಶ ಕ್ಷೇತ್ರ ಪ್ರವೇಶಿಸಲು ಅನುಮತಿ ದೊರೆತ ನಂತರ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಪ್ರವೇಶ ಪಡೆದ ಮೊದಲ ಖಾಸಗಿ ಕಂಪನಿ ಸ್ಕೈರೂಟ್ ಏರೋಸ್ಪೇಸ್ ಆಗಿದೆ.

ಈ ಕಂಪನಿಯ ಮೊದಲ ವಿಕ್ರಮ್-ಎಸ್ ರಾಕೆಟ್ ಉಡಾವಣೆ ಬೆಳಿಗ್ಗೆ 11.30ಕ್ಕೆ ನಿಗದಿಪಡಿಸಲಾಗಿದೆ.

ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ನಂತರ ವಿಕ್ರಮ್-ಎಸ್ ರಾಕೆಟ್ 81 ಕಿಮೀ ಎತ್ತರಕ್ಕೆ ಹಾರಲಿದೆ. ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ, ದಿವಂಗತ ವಿಕ್ರಮ್ ಸಾರಾಭಾಯ್ ಅವರಿಗೆ ಗೌರವಾರ್ಥವಾಗಿ ರಾಕೆಟ್ಗೆ ವಿಕ್ರಮ್ ಎಂದು ಹೆಸರಿಡಲಾಗಿದೆ.

ಈ ಮಿಶನ್ಗೆ 'ಪ್ರಾರಂಭ' ಎಂದು ಹೆಸರಿಡಲಾಗಿದೆ,

ಆರು ಮೀಟರ್ ಎತ್ತರದ ರಾಕೆಟ್ ವಿಶ್ವದ ಸಂಪೂರ್ಣ ಸಂಯೋಜಿತ ರಾಕೆಟ್ಗಳಲ್ಲಿ ಒಂದಾಗಿದೆ. ಉಡಾವಣಾ ವಾಹನದ ಸ್ಪಿನ್ ಸ್ಥಿರತೆಗಾಗಿ 3-ಡಿ ಮುದ್ರಿತ ಘನ ಥ್ರಸ್ಟರ್ಗಳನ್ನು ಹೊಂದಿದೆ ಎಂದು ಸ್ಕೈರೂಟ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.