ನವದೆಹಲಿ: ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ದಾಳಿ ನಡೆಸಿರುವಂತೆಯೇ ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ಪ್ರೆಸ್, ಇಂಡಿಗೊ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ಪಶ್ಚಿಮ ಏಷ್ಯಾ ದೇಶಗಳಿಗೆ ವಿಮಾನ ಸೇವೆಗಳನ್ನು ಶನಿವಾರ ತಾತ್ಕಾಲಿಕವಾಗಿ ರದ್ದುಗೊಳಿಸಿವೆ.

ದುಬೈ, ಜೆದ್ದಾ, ದೋಹಾ, ಅಬುಧಾಬಿ, ಬಹರೇನ್, ಕುವೈತ್, ಶಾರ್ಜಾಗಳಿಂದ ಬರುವ ಹಾಗೂ ಅಲ್ಲಿಗೆ ತೆರಳುವ ವಿಮಾನಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿರುವುದಾಗಿ ಇಂಡಿಗೊ ತಿಳಿಸಿದೆ. ಪ್ರಯಾಣಿಕರು ಹಾಗೂ ವಿಮಾನ ಸಿಬ್ಬಂದಿಯ ಸುರಕ್ಷತೆಗಾಗಿ ಈ ಕ್ರಮ ಕೈಗೊಂಡಿರುವುದಾಗಿ ಹೇಳಿದೆ.

ಪಶ್ಚಿಮ ಏಷ್ಯಾ ದೇಶಗಳಿಗೆ ತೆರಳುವ ಎಲ್ಲಾ ಅಂತರರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ. ಅಗತ್ಯಕ್ಕೆ ತಕ್ಕಂತೆ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಏರ್ ಇಂಡಿಯಾ ಎಕ್ಸ್ಪ್ರೆಸ್ ತಿಳಿಸಿದೆ.

ಇಸ್ರೇಲ್ನ ವಾಯುಪ್ರದೇಶದ ನಿರ್ಬಂಧದಿಂದಾಗಿ ದೆಹಲಿ–ಟೆಲ್ ಅವಿವ್ ಏರ್ ಇಂಡಿಯಾ ವಿಮಾನವನ್ನು ಸೌದಿ ಅರೇಬಿಯಾಗೆ ಮಾರ್ಗ ಬದಲಿಸಲಾಗಿತ್ತು. ಬಳಿಕ ಅಲ್ಲಿಂದ ಮುಂಬೈಗೆ ವಿಮಾನ ಹಿಂದಿರುಗಿದೆ.

ತಿರುವನಂತಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೂ ಕೂಡ ಪ್ರಯಾಣಿಕರ ಮಾರ್ಗಸೂಚಿ ಹೊರಡಿಸಿದ್ದು, ಕೆಲವು ಅಂತರರಾಷ್ಟ್ರೀಯ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಬಹುದು ಎಂದು ತಿಳಿಸಿದೆ.

ವಿವಿಧ ರಾಷ್ಟ್ರಗಳಿಂದಲೂ ಮುಂಜಾಗ್ರತಾ ಕ್ರಮ:

ಇಸ್ರೇಲ್ ಇರಾನ್ ಇರಾಕ್ ಸೇರಿದಂತೆ ವಿವಿಧ ದೇಶಗಳ ವಾಯುಪ್ರದೇಶಗಳಲ್ಲಿ ವಿಮಾನ ಹಾರಾಟಕ್ಕೆ ನಿರ್ಬಂಧ ಹೇರಿರುವ ನಡುವೆಯೇ ಹಲವು ರಾಷ್ಟ್ರಗಳ ವಿಮಾನಯಾನ ಸಂಸ್ಥೆಗಳು ಮುಂಜಾಗ್ರತಾ ಕ್ರಮವಾಗಿ ವಿಮಾನಗಳ ಪ್ರಯಾಣವನ್ನು ರದ್ದುಗೊಳಿಸಿವೆ.

ಕತಾರ್ನಿಂದ ಹೊರಟಿದ್ದ ವಿಮಾನಗಳು ಕುವೈತ್–ಸೌದಿ ಅರೇಬಿಯಾ ಮಾರ್ಗವಾಗಿ ಮತ್ತೆ ಕತಾರ್ಗೆ ವಾಪಸಾಗಿವೆ. ರಷ್ಯಾದ ವಿಮಾನಯಾನ ಸಂಸ್ಥೆಗಳು ಇರಾನ್ ಹಾಗೂ ಇಸ್ರೇಲ್ಗೆ ವಿಮಾನ ಸಂಚಾರ ರದ್ದುಗೊಳಿಸಿವೆ. ಜರ್ಮನಿಯ ಲುಫ್ತಾನ್ಸಾ ಸಂಸ್ಥೆಯು ಟೆಲ್ ಅವಿವ್ ಬೈರುತ್ ಒಮಾನ್ ಮಾರ್ಗದ ವಿಮಾನಗಳನ್ನು ಮಾ.7ರ ವರೆಗೆ ತಾತ್ಕಾಲಿಕವಾಗಿ ರದ್ದುಗೊಳಿಸಿದೆ. ಒಮಾನ್ನಿಂದಲೂ ಬಾಗ್ದಾದ್ಗೆ ಎಲ್ಲಾ ವಿಮಾನಗಳನ್ನೂ ರದ್ದುಗೊಳಿಸಲಾಗಿದೆ. ಬ್ರಿಟಿಷ್ ಏರ್ವೇಸ್ ವಿಜ್ ಏರ್ ಹಾಗೂ ಗ್ರೀಸ್ನ ಏಜಿಯನ್ ವಿಮಾನಯಾನ ಸಂಸ್ಥೆಯೂ ಕೂಡ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.