ಇಂದೋರ್: ಮಧ್ಯಪ್ರದೇಶದ ಇಂದೋರ್ನ ಭಗೀರಥಪುರದಲ್ಲಿ ಕಲುಷಿತ ನೀರಿನ ಸೇವನೆಯಿಂದ ಉಂಟಾದ ಅತಿಸಾರದಿಂದಾಗಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ ಎಂದು ಮೇಯರ್ ಪುಷ್ಯಮಿತ್ರ ಭಾರ್ಗವ್ ತಿಳಿಸಿದ್ದಾರೆ.
.ದೇಶದ ಸ್ವಚ್ಛ ನಗರ ಇಂದೋರ್ ದುರಂತಕ್ಕೆ ಕಲುಷಿತ ನೀರಿನ ಸೇವನೆಯೇ ಕಾರಣ: ವರದಿ.
ಅದಾಗ್ಯೂ, ಸ್ಥಳೀಯರು ಆರು ತಿಂಗಳ ಮಗು ಸೇರಿ 14 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆ ಖಚಿತಪಡಿಸಿಲ್ಲ.

‘ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಭಗೀರಥಪುರದಲ್ಲಿ ಅತಿಸಾರದಿಂದ ನಾಲ್ವರು ಮೃತಪಟ್ಟಿದ್ದಾರೆ. ಆದರೆ 10 ಜನ ಮೃತಪಟ್ಟಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ’ ಎಂದು ಪಿಟಿಐಗೆ ಮೇಯರ್ ತಿಳಿಸಿದ್ದಾರೆ.

ಪೈಪ್ಲೈನ್ನಲ್ಲಿನ ಸೋರಿಕೆಯಿಂದಾಗಿ ಈ ಪ್ರದೇಶದ ಕುಡಿಯುವ ನೀರು ಕಲುಷಿತವಾಗಿದೆ ಎಂದು ನಗರದ ವೈದ್ಯಕೀಯ ಕಾಲೇಜಿನ ಪ್ರಯೋಗಾಲಯದ ಪರೀಕ್ಷಾ ವರದಿಗಳು ದೃಢಪಡಿಸಿವೆ ಎಂದು ತಿಳಿಸಿರುವ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ. ಮಾಧವ್ ಪ್ರಸಾದ್ ಹಸಾನಿ, ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ.

ಕಲುಷಿತ ನೀರಿನಿಂದಾಗಿ ಕಳೆದ 9 ದಿನಗಳಿಂದ ಈ ಪ್ರದೇಶದ 1,400ಕ್ಕೂ ಹೆಚ್ಚು ಜನರು ವಾಂತಿ, ಅತಿಸಾರದಿಂದ ಬಳಲುತ್ತಿದ್ದಾರೆ. ಈವರೆಗೆ 272 ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದು, 71 ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 201 ರೋಗಿಗಳಲ್ಲಿ 32 ರೋಗಿಗಳನ್ನು ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
.ಹಾಲಿಗೆ ಬೆರೆಸಿದ ಹನಿ ನೀರು ಮಗುವಿನ ಪ್ರಾಣ ತೆಗೆಯಿತು!.ಇಂದೋರ್: ಕಲುಷಿತ ನೀರು ಸೇವಿಸಿ 7 ಸಾವು, 140ಕ್ಕೂ ಅಧಿಕ ಮಂದಿ ಅಸ್ವಸ್ಥ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.