ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲೇಟಿನಿಂದ ಗಾಯ: ವಿಶ್ರಾಂತಿ ಬಳಿಕ ಪ್ರಚಾರ ಪುನರಾರಂಭಿಸಿದ ಆಂಧ್ರ ಸಿಎಂ ಜಗನ್‌

Published 15 ಏಪ್ರಿಲ್ 2024, 6:46 IST
Last Updated 15 ಏಪ್ರಿಲ್ 2024, 6:46 IST
ಅಕ್ಷರ ಗಾತ್ರ

ಎನ್‌ಟಿಆರ್ ಜಿಲ್ಲೆ (ಆಂಧ್ರಪ್ರದೇಶ): ಕಲ್ಲೇಟಿನಿಂದ ಗಾಯಗೊಂಡಿದ್ದ ವೈಎಸ್‌ಆರ್‌ಸಿಪಿ ಪಕ್ಷದ ಮುಖ್ಯಸ್ಥರೂ ಆಗಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌ ಜಗನ್‌ ಮೋಹನ್‌ ರೆಡ್ಡಿ ಒಂದು ದಿನದ ವಿಶ್ರಾಂತಿ ಬಳಿಕ ಸೋಮವಾರದಿಂದ ಪ್ರಚಾರ ಪುನರಾರಂಭಿಸಿದ್ದಾರೆ. ಇಲ್ಲಿನ ಕೇಸರಪಲ್ಲಿಯಿಂದ ತಮ್ಮ ಬಸ್‌ ಯಾತ್ರೆಯನ್ನು ಮುಂದುವರಿಸಿದ್ದಾರೆ.

ವಿಜಯವಾಡದ ಸಿಂಗ್‌ ನಗರದ ವಿವೇಕಾನಂದ ಕಾಲೇಜು ಬಳಿ ಪ್ರಚಾರ ನಡೆಸುತ್ತಿದ್ದ ವೇಳೆ ಅನಾಮಿಕ ವ್ಯಕ್ತಿಯೊಬ್ಬ ಕಲ್ಲೆಸೆದಿದ್ದ. ಪರಿಣಾಮ ಅವರ ಎಡಹುಬ್ಬಿಗೆ ಗಾಯವಾಗಿತ್ತು.

ಕಡಪ ಜಿಲ್ಲೆಯ ಇಡುಪುಲಪಾಯದಿಂದ ಶ್ರೀಕಾಕುಳಂನ ಇಚ್ಚಾಪುರಂವರೆಗೆ ಚುನಾವಣಾ ಪ್ರಚಾರಾರ್ಥವಾಗಿ 21 ದಿನಗಳ ಬಸ್‌ ಯಾತ್ರೆಯನ್ನು ಜಗನ್‌ಮೋಹನ್‌ರೆಡ್ಡಿ ಹಮ್ಮಿಕೊಂಡಿದ್ದು, ಇಂದು ವೀರವಲ್ಲಿ ಕ್ರಾಸ್‌, ಹನುಮಾನ್ ಜಂಕ್ಷನ್‌ ಸೇರಿ ಹಲವು ಗ್ರಾಮಗಳಲ್ಲಿ ಸಂಚರಿಸಲಿವೆ.

ಆಂಧ್ರ‍‍ಪ್ರದೇಶದಲ್ಲಿ ಲೋಕಸಭೆ ಹಾಗೂ ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಯಲಿದೆ. ಮೇ 13ಕ್ಕೆ ಮತದಾನ ನಡೆಯಲಿದ್ದು, ಜೂನ್ 4ಕ್ಕೆ ಮತ ಎಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT