ವಿಜಯವಾಡ: ಆಂಧ್ರಪ್ರದೇಶದ ವಿಜಯವಾಡದಲ್ಲಿ ಶನಿವಾರ ರೋಡ್ ಶೋ ವೇಳೆ ನಡೆದ ಕಲ್ಲು ತೂರಾಟದಲ್ಲಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಗಾಯಗೊಂಡಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಕಾರ್ಯಾಲಯವು, ‘ವಿಜಯವಾಡದ ಸಿಂಘ್ ನಗರದಲ್ಲಿ ಬಸ್ ಯಾತ್ರೆ ನಡೆಸುತ್ತಿದ್ದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು ಗುರಿಯಾಗಿಸಿ ಕಲ್ಲು ತೂರಾಟ ನಡೆದಿದೆ. ಅವರಿಗೆ ಕಲ್ಲೇಟು ಬಿದ್ದ ತಕ್ಷಣವೇ ಅವರನ್ನು ಬಸ್ ಒಳಕ್ಕೆ ಕರೆದೊಯ್ದು, ವೈದ್ಯರು ಚಿಕಿತ್ಸೆ ನೀಡಿದ್ದಾರೆ’ ಎಂದು ಹೇಳಿದೆ.

ದುಷ್ಕರ್ಮಿಗಳು ಕವಣೆ ಬಳಸಿ ಈ ಕೃತ್ಯ ಎಸಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಈ ದಾಳಿಯ ಹಿಂದೆ ಟಿಡಿಪಿ ಇದೆ ಎಂದು ವೈಎಸ್ಆರ್‌ಸಿಪಿ ಮುಖಂಡರು ದೂರಿದ್ದಾರೆ.

ಜಗನ್ ಮೋಹನ್ ರೆಡ್ಡಿ ಅವರು ಕಡಪಾ ಜಿಲ್ಲೆಯ ಇಡುಪುಲುಪಾಯದಿಂದ ಶ್ರೀಕಾಕುಳಂ ಜಿಲ್ಲೆಯ ಇಚ್ಚಾಪುರಂವರೆಗೆ 21 ದಿನಗಳ ಬಸ್ ಯಾತ್ರೆಯನ್ನು ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.