ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಂತ್‌ಗೆ ಅನ್ಯಾಯವಾಗಿದೆ, JMM ಮೈತ್ರಿಯು 14 ಸ್ಥಾನಗಳಲ್ಲೂ ಗೆಲ್ಲಲಿದೆ: ಚಂಪೈ

Published 2 ಏಪ್ರಿಲ್ 2024, 13:04 IST
Last Updated 2 ಏಪ್ರಿಲ್ 2024, 13:04 IST
ಅಕ್ಷರ ಗಾತ್ರ

ರಾಂಚಿ: ಜೈಲಿನಲ್ಲಿರುವ ಹೇಮಂತ್ ಸೊರೇನ್ ಅವರಿಗೆ ಬಹಳ ಅನ್ಯಾಯವಾಗಿದೆ ಎಂದು ಹೇಳಿರುವ ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೇನ್ ಅವರು, ಜಾರ್ಖಂಡ್‌ನ 14 ಲೋಕಸಭಾ ಕ್ಷೇತ್ರಗಳಲ್ಲೂ ಜೆಎಂಎಂ ನೇತೃತ್ವದ ಮೈತ್ರಿಕೂಟ ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ.

ಗಂಡೇಯ್ ವಿಧಾನಸಭಾ ಕ್ಷೇತ್ರದಿಂದ ಕಲ್ಪನಾ ಸೊರೇನ್ ಅವರನ್ನು ಕಣಕ್ಕಿಳಿಸುವ ಬಗ್ಗೆ ವಾರದಲ್ಲಿ ತೀರ್ಮಾನ ಕೈಗೊಳ್ಳುವುದಾಗಿಯೂ ಅವರು ಹೇಳಿದ್ದಾರೆ.

ಕಲ್ಪನಾ ಸೊರೇನ್, ಹೇಮಂತ್ ಸೊರೇನ್ ಅವರ ಪತ್ನಿಯಾಗಿದ್ದು, ಪಕ್ಷದ ಕಾರ್ಯಕಾರಿ ಅಧ್ಯಕ್ಷೆಯಾಗಿದ್ದಾರೆ.

ಜೆಎಂಎಂ ಶಾಸಕ ಸರ್ಫರಾಜ್ ಅಹಮ್ಮದ್ ರಾಜೀನಾಮೆಯಿಂದ ಗಂಡೇಯ್ ಕ್ಷೇತ್ರ ತೆರವಾಗಿದ್ದು, ಇದೇ 20ರಂದು ಲೋಕಸಭೆ ಚುನಾವಣೆ ಜೊತೆಗೇ ಈ ವಿಧಾನಸಭಾ ಕ್ಷೇತ್ರದ ಚುನಾವಣೆಯೂ ನಡೆಯಲಿದೆ. ಈ ಕ್ಷೇತ್ರದಿಂದ ಕಲ್ಪನಾ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳಿವೆ.

‘ಗಂಡೇಯ್ ಕ್ಷೇತ್ರದಿಂದ ಕಲ್ಪನಾ ಅವರನ್ನು ಕಣಕ್ಕಿಳಿಸುವ ಕುರಿತಂತೆ ವಾರದಲ್ಲಿ ಜೆಎಂಎಂ ತೀರ್ಮಾನ ಮಾಡಲಿದೆ. ಕಲ್ಪನಾ ಸ್ಪರ್ಧಿಸಿ ಗೆದ್ದು ಬಂದರೆ ಅವರನ್ನು ಮುಖ್ಯಮಂತ್ರಿ ಮಾಡುವ ಕುರಿತಂತೆ ಪಕ್ಷದ ಅಧ್ಯಕ್ಷ ಶಿಭು ಸೊರೇನ್, ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಪಕ್ಷದ ಇತರ ಮುಖಂಡರು ತೀರ್ಮಾನ ಕೈಗೊಳ್ಳುತ್ತಾರೆ’ಎಂದು ಚಂಪೈ ಸೊರೇನ್ ಹೇಳಿದರು.

ಭೂ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಹೇಮಂತ್ ಸೊರೇನ್ ಅವರಿಗೆ ಬಹಳ ಅನ್ಯಾಯವಾಗಿದೆ ಎಂದು ಸೊರೇನ್ ಹೇಳಿದ್ದಾರೆ.

‘ಬಿಜೆಪಿ ನೇತೃತ್ವದ ಶಕ್ತಿಗಳು ಅವರನ್ನು ಜೈಲಿನಲ್ಲಿಡುವಲ್ಲಿ ಯಶಸ್ವಿಯಾಗಿರಬಹುದು. ಆದರೆ, ಜಾರ್ಖಂಡ್‌ನ ಆದಿವಾಸಿಗಳು ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ನಿರ್ಗಮನದ ದಾರಿ ತೋರಿಸಲಿದ್ದಾರೆ. ಎಲ್ಲ 14 ಕ್ಷೇತ್ರಗಳಲ್ಲೂ ಜೆಎಂಎಂ ನೇತೃತ್ವದ ಮೈತ್ರಿಕೂಟ ಗೆಲ್ಲುವ ವಿಶಾಸವಿದೆ’ಎಂದಿದ್ದಾರೆ.

ಇದೇವೇಳೆ, ತಮ್ಮನ್ನು ಕಡೆಗಣಿಸಲಾಗಿದೆ ಎಂಬ ಶಿಬು ಸೊರೇನ್ ಅವರ ಹಿರಿಯ ಸೊಸೆ ಸೀತಾ ಆರೋಪವನ್ನು ತಳ್ಳಿಹಾಕಿದ ಸೊರೇನ್, ಅವರನ್ನು ಪಕ್ಷ 3 ಬಾರಿ ಶಾಸಕರನ್ನಾಗಿ ಮಾಡಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT