ಚಂಡಿಗಡ: ಬಿಜೆಪಿಯ ಟಿಕೆಟ್ ವಂಚಿತರುನಿರಾಶರಾಗಬೇಕಿಲ್ಲ, ಅವರನ್ನು ಪಕ್ಷ ಮರೆಯುವುದಿಲ್ಲ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್‌ಲಾಲ್‌ಖಟ್ಟರ್ಮಂಗಳವಾರ ತಿಳಿಸಿದ್ದಾರೆ.

ಯಾವುದೇ ರಾಜಕೀಯ ಪಕ್ಷ ತಾಯಿ ಇದ್ದಂತೆ, ಬಿಜೆಪಿಯ ಟಿಕೆಟ್ ವಂಚಿತರು ಬೇರೆ ಪಕ್ಷಕ್ಕೆ ಹೋಗುವುದಿಲ್ಲಹಾಗೇಚುನಾವಣೆ ಬಳಿಕ ಪಕ್ಷ ಅವರನ್ನು ಯಾವುದೇ ಕಾರಣಕ್ಕೂ ಮರೆಯುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಹರಿಯಾಣ: ಬಿಜೆಪಿ ಗೆಲ್ಲುವ ನೆಚ್ಚಿನ ಪಕ್ಷ

ನಾಮಪತ್ರಸಲ್ಲಿಸುವುದಕ್ಕೂಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಖಟ್ಟರ್ ಟಿಕೆಟ್ ವಂಚಿತರನ್ನು ಸಮಾಧಾನ ಪಡಿಸಲು ಯತ್ನಿಸಿದ್ದಾರೆ.

ಹರಿಯಾಣದಲ್ಲಿ ವಿಧಾನಸಭೆ ಚುನಾವಣೆಯ ಕಾವುರಂಗೇರುತ್ತಿದ್ದುಬಿಜೆಪಿಯು 78 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು ಇಬ್ಬರು ಸಚಿವರುಸೇರಿದಂತೆ7 ಜನ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದೆ.

ಸಚಿವರಾದ ವಿಪುಲ್‌ಗೋಯಲ್, ರಾವ್‌ನರ್ಬಿರ್ಸಿಂಗ್ ಹಾಗೂ ವಿಧಾನಸಭೆ ಉಪಾಧ್ಯಕ್ಷರಾದ ಸಂತೋಷ್ ಯಾದವ್ ಅವರಿಗೆ ಟಿಕೇಟ್ ನಿರಾಕರಿಸಲಾಗಿದೆ. ಇವರ ಜೊತೆಗೆ 7 ಜನ ಹಾಲಿ ಶಾಸಕರಿಗೂ ಟಿಕೆಟ್ ನೀಡಲಾಗಿಲ್ಲ.

ಇದನ್ನೂ ಓದಿ:ಹರಿಯಾಣ: ಕ್ರೀಡಾಳುಗಳಿಗೆ ಬಿಜೆಪಿ ಮಣೆ; ಯೋಗೇಶ್ವರ ದತ್, ಬಬಿತಾ ಪೋಗಟ್ಗೆ ಟಿಕೆಟ್

90 ಸ್ಥಾನಗಳ ಪೈಕಿಬಿಜೆಪಿ78 ಸ್ಥಾನಗಳಿಗೆ ಅಭ್ಯರ್ಥಿಗಳನ್ನುಅಂತಿಮಗೊಳಿಸಿದೆ. ಒಂದೆರಡು ದಿನಗಳಲ್ಲಿ ಉಳಿದ 12 ಸ್ಥಾನಗಳ ಅಭ್ಯರ್ಥಿಗಳನ್ನು ಪ್ರಕಟಿಸಲಾಗುವುದು ಎಂದುಬಿಜೆಪಿಹಿರಿಯ ನಾಯಕರು ಹೇಳಿದ್ದಾರೆ.

ಈ ಸಲ ಮೂವರು ಒಲಿಂಪಿಕ್ ಕ್ರೀಡಾಪಟುಗಳಿಗೆಬಿಜೆಪಿಟಿಕೆಟ್ ನೀಡಿದ್ದು ಅವರುಗೆಲ್ಲಲಿದ್ದಾರೆಎಂಬ ವಿಶ್ವಾಸವನ್ನುಬಿಜೆಪಿನಾಯಕರು ವ್ಯಕ್ತಪಡಿಸಿದ್ದಾರೆ.

2014ರವಿಧಾನಸಭಾಚುನಾವಣೆಯಲ್ಲಿಬಿಜೆಪಿ47 ಸ್ಥಾನಗಳನ್ನು ಗೆಲ್ಲುವ ಮೂಲಕ ಸರಳ ಬಹುಮತವನ್ನು ಪಡೆದಿತ್ತು. ಆದರೆಈ ಬಾರಿ 75ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸವನ್ನುಬಿಜೆಪಿಹೊಂದಿದೆ.

ಇದನ್ನೂ ಓದಿ:ಹರಿಯಾಣ: ಬಿಜೆಪಿ ಜತೆ ಎಸ್ಎಡಿ ಮೈತ್ರಿ ಇಲ್ಲ

ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 21ರಂದು ನಡೆಯಲಿರುವ ಚುನಾವಣೆಯುಅಧಿಕಾರಾರೂಢಬಿಜೆಪಿಮತ್ತು ಕಾಂಗ್ರೆಸ್ ನೇತೃತ್ವದ ವಿರೋಧಪಕ್ಷಗಳ ಮೈತ್ರಿಯ ನಡುವಿನ ನೇರಹಣಾಹಣಿಯಾಗಲಿದೆ.

ಹರಿಯಾಣದಲ್ಲಿ ಕಾಂಗ್ರೆಸ್‌ಪಕ್ಷವು ಗಳಿಸುವ ಸ್ಥಾನಗಳ ಸಂಖ್ಯೆಇಳಿಮುಖವಾಗುತ್ತಿದ್ದರೂಕಳೆದ ಕೆಲವು ವರ್ಷಗಳಿಂದ ಪಕ್ಷದಮತಪ್ರಮಾಣವುಏರಿಕೆಯಾಗುತ್ತಲೇಇದೆ. 2014ರ ಲೋಕಸಭಾ ಚುನಾವಣೆಯಲ್ಲಿಶೇ22.99ರಷ್ಟು ಮತಗಳನ್ನು ಗಳಿಸಿದ್ದ ಕಾಂಗ್ರೆಸ್, 2019ರ ಚುನಾವಣೆಯಲ್ಲಿ ಅದನ್ನುಶೇ29ಕ್ಕೆಏರಿಸಿಕೊಂಡಿತ್ತು. ಈ ಏರಿಕೆಯನ್ನು ಸ್ಥಾನಗಳಾಗಿ ಪರಿವರ್ತಿಸಲು ಕಾಂಗ್ರೆಸ್ ಸಾಕಷ್ಟು ಪ್ರಯತ್ನ ಮಾಡುತ್ತಿದೆ.

ಇದನ್ನೂ ಓದಿ:ಹರಿಯಾಣ: ಐಎನ್ಎಲ್ಡಿ ಉಳಿವೇ ಕಷ್ಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.