ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಹ್ರಾಡೂನ್‌ನಲ್ಲಿ ಪ್ರಧಾನಿ ಯೋಗ; 55 ಸಾವಿರ ಉತ್ಸಾಹಿಗಳು ಭಾಗಿ

ಅಂತರರಾಷ್ಟ್ರೀಯ ಯೋಗ ದಿನ
Last Updated 21 ಜೂನ್ 2018, 2:04 IST
ಅಕ್ಷರ ಗಾತ್ರ

ಡೆಹ್ರಾಡೂನ್‌: ಅಂತರರಾಷ್ಟ್ರೀಯ ಮನ್ನಣೆ ಪಡೆದುಕೊಂಡಿರುವ ಯೋಗವನ್ನು ಜಗತ್ತಿನಾದ್ಯಂತ ಗುರುವಾರ ಆಚರಿಸಲಾಗುತ್ತಿದೆ. ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಪ್ರಧಾನಿ ಮೋದಿ ನಾಲ್ಕನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಆಸನಗಳನ್ನು ಪ್ರದರ್ಶಿಸಿದರು.

ಫಾರೆಸ್ಟ್‌ ಇನ್‌ಸ್ಟಿಟ್ಯೂಟ್‌ ಗ್ರೌಂಡ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ 55 ಸಾವಿರ ಉತ್ಸಾಹಿಗಳೊಂದಿಗೆ ಪ್ರಧಾನಿ ಯೋಗ ಆಸನಗಳ ಪ್ರದರ್ಶನದಲ್ಲಿ ಭಾಗಿಯಾದರು.

’ಜಗತ್ತಿನ ಅತಿ ದೊಡ್ಡಸಾಮೂಹಿಕ ಚಳವಳಿಯಾಗಿ ಬೆಳೆದಿರುವ ಯೋಗಕ್ಕೆ ಇಡೀ ಜಗತ್ತನೇ ಒಂದು ಗೂಡಿಸುವ ಶಕ್ತಿಯಿದೆ.ಟೋಕಿಯೋದಿಂದ ಟೊರಾಂಟೊ, ಶಾಂಘೈನಿಂದ ಚಿಕಾಗೊ, ಸ್ಟಾಕ್‌ಹೋಮ್‌ನಿಂದ ಸಾವೊಪೌಲೊ ಸೇರಿ ವಿಶ್ವದ ಎಲ್ಲೆಡೆಯೂ ಯೋಗ ಆಚರಿಸಲಾಗುತ್ತಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.


’ಹಿಂದಿನ, ಈಗಿನ ಹಾಗೂ ಮುಂದಿನ ಭರವಸೆಯೇ ಯೋಗ. ಪ್ರತಿ ವರ್ಷ ಜಗತ್ತಿನಲ್ಲಿ 180 ಲಕ್ಷ ಜನರು ಹೃದಯ ಸಂಬಂಧಿ ಕಾಯಿಲೆಗೆ ಹಾಗೂ 16 ಲಕ್ಷ ಮಂದಿ ಡಯಾಬಿಟಿಸ್‌ಗೆ ಒಳಗಾಗುತ್ತಿದ್ದಾರೆ. ಯೋಗ ಅಭ್ಯಾಸ ಮಾಡುವುದರಿಂದ ರೋಗದಿಂದ ಮುಕ್ತಿ ಪಡೆಯಬಹುದು, ಆರೋಗ್ಯ ಸುಧಾರಣೆಯಿಂದ ವೈದ್ಯಕೀಯ ಖರ್ಚು ಕೂಡ ಕಡಿಮೆ ಮಾಡಬಹುದು’ ಎಂದು ಸಲಹೆ ನೀಡಿದರು.


* ವಿಶ್ವದ ಪ್ರತಿ ದೇಶ, ಪ್ರತಿ ವ್ಯಕ್ತಿ ಯೋಗವನ್ನು ತನ್ನದಾಗಿಸಿಕೊಂಡಿದ್ದಾರೆ.
– ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT