ನೈನಿತಾಲ್: ಸಾರ್ವಜನಿಕರ ಮೊಬೈಲ್ ಫೋನ್ ಹ್ಯಾಕ್ ಮಾಡಿ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾಯಿಸಿಕೊಂಡು ವಂಚಿಸುತ್ತಿದ್ದ ಜಾಲವನ್ನು ಭೇದಿಸಿರುವ ಉತ್ತರಾಖಂಡ ಪೊಲೀಸರು ನಾಲ್ವರು ಅಂತರರಾಜ್ಯ ಸೈಬರ್ ವಂಚಕರನ್ನು ಬಂಧಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳ ಮೂಲಕ ಲಿಂಕ್ ಕಳುಹಿಸಿ ಫೋನ್ ಹ್ಯಾಕ್ ಮಾಡುತ್ತಿದ್ದರು. ವಂಚಕರು ತಮ್ಮ ಗುರುತು ಮರೆಮಾಡಲು ಮ್ಯೂಲ್ ಖಾತಗಳ ಮೂಲಕ ವಹಿವಾಟು ನಡೆಸುತ್ತಿದ್ದರು. ಪ್ರಾಥಮಿಕ ತನಿಖೆಯಲ್ಲಿ ₹3.37 ಕೋಟಿ ಹಣ ಅನುಮಾನಾಸ್ಪದವಾಗಿ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ಕಾರೊಂದನ್ನು ವಶಪಡಿಸಿಕೊಂಡಿದ್ದರು. ಕಾರಿನಲ್ಲಿ ನಾಲ್ವರು ಅನುಮಾನಾಸ್ಪದ ವ್ಯಕ್ತಿಗಳು ಪತ್ತೆಯಾಗಿದ್ದು, ಸಂಪೂರ್ಣ ಶೋಧ ನಡೆಸಿದಾಗ 11 ಫೋನ್ಗಳು, ಒಂಬತ್ತು ಸಿಮ್ ಕಾರ್ಡ್ಗಳು, ಹಲವಾರು ಆಧಾರ್ ಮತ್ತು ಪ್ಯಾನ್ ಕಾರ್ಡ್ಗಳು, ಚೆಕ್ ಬುಕ್ಗಳು, ಕ್ಯೂಆರ್ ಕೋಡ್ಗಳು ಮತ್ತು ಹಲವಾರು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೋನ್ಗಳನ್ನು ಹ್ಯಾಕ್ ಮಾಡಲು ಸಾಮಾಜಿಕ ಮಾಧ್ಯಮದ ಮೂಲಕ APK ಫೈಲ್ಗಳನ್ನು ಕಳುಹಿಸಿದ್ದಾಗಿಯೂ, ನಂತರ ವಿವಿಧ ಮ್ಯೂಲ್ ಖಾತೆಗಳಿಗೆ ಹಣವನ್ನು ವರ್ಗಾಯಿಕೊಂಡಿರುವುದಾಗಿಯೂ ವಂಚಕರು ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾರೆ.
.ಡಿಜಿಟಲ್ ಅರೆಸ್ಟ್: ಸಾಫ್ಟ್ವೇರ್ ಉದ್ಯೋಗಿಗೆ ₹31.83 ಕೋಟಿ ವಂಚನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.