ಭೂಪಾಲ್: ‘ಕುರಾನ್ನೊಂದಿಗೆ ಭಗವದ್ಗೀತೆಯನ್ನೂ ಓದುವುದರಿಂದ ಜ್ಞಾನೋದಯಕ್ಕೆ ಸಹಕಾರಿಯಾಗಲಿದೆ’ ಎಂದು ಹೆಚ್ಚುವರಿ ಡಿಜಿಪಿ (ತರಬೇತಿ) ರಾಜಾ ಬಾಬು ಸಿಂಗ್ ಅಭಿಪ್ರಾಯಪಟ್ಟರು.

ಮದರಸಾವೊಂದರಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದರು. ಈ ಬಗ್ಗೆ ರಾಜಾ ಬಾಬು ಅವರು ‘ಪಿಟಿಐ’ ಸುದ್ದಿ ಸಂಸ್ಥೆಯೊಂದಿಗೆ ಮಾಹಿತಿ ಹಂಚಿಕೊಂಡರು. ‘ಇಲ್ಲಿನ ಮೌಲಾನಾ ನನ್ನ ಹಳೆಯ ಮಿತ್ರರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವಂತೆ ಅವರು ಮನವಿ ಮಾಡಿದ್ದರು’ ಎಂದರು.

‘ಕಾರ್ಯಕ್ರಮದಲ್ಲಿ ಮಾತನಾಡಿದ ನಾನು, ‘ಭಗವದ್ಗೀತೆಯು ಇಡೀ ಮಾನವಕುಲವನ್ನು ಶತಮಾನಗಳಿಂದ ಜ್ಞಾನ ನೀಡುತ್ತಲೇ ಬಂದಿದೆ. ಆದ್ದರಿಂದ, ಕುರಾನ್ನೊಂದಿಗೆ ಭಗವದ್ಗೀತೆಯನ್ನೂ ಓದಿ. ಇದೊಂದು ದೊಡ್ಡ ದೇಶ. ಇಲ್ಲಿನ ಏಕತೆ, ಸಮಗ್ರತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದೆ’ ಎಂದರು.

‘ರಾಜ್ಯದಲ್ಲಿರುವ ಎಲ್ಲ ಪೊಲೀಸ್ ತರಬೇತಿ ಕೇಂದ್ರಗಳಲ್ಲಿಯೂ ಭಗವದ್ಗೀತೆ ಮತ್ತು ರಾಮಚರಿತ ಮಾನಸ ಕೃತಿಗಳನ್ನು ಓದುವ ಸಮಯವನ್ನು ನಿಗದಿ ಮಾಡಬೇಕು. ಇದರಿಂದ ತರಬೇತಿ ಪಡೆಯುತ್ತಿರುವವರು ನೀತಿ ಮಾರ್ಗದಲ್ಲಿ ಸಾಗಬಹುದು’ ಎಂದು ರಾಜಾ ಬಾಬು ಸಿಂಗ್ ಅವರು ಈ ಹಿಂದೆ ಹೇಳಿದ್ದರು. ಇದು ದೊಡ್ಡ ಸುದ್ದಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.