ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Chandrayaan-3: ಚಂದ್ರನ ಮೇಲ್ಮೈ ಫೋಟೊ, ವಿಡಿಯೊ ಹಂಚಿಕೊಂಡ ಇಸ್ರೊ

Published 18 ಆಗಸ್ಟ್ 2023, 11:32 IST
Last Updated 18 ಆಗಸ್ಟ್ 2023, 11:32 IST
ಅಕ್ಷರ ಗಾತ್ರ

ಬೆಂಗಳೂರು: ಚಂದ್ರಯಾನ –3 ರ ಬಾಹ್ಯಾಕಾಶ ನೌಕೆಯಿಂದ ಲ್ಯಾಂಡರ್‌ ಗುರುವಾರ ಬೇರ್ಪಟ್ಟಿದೆ. ಇದೀಗ ಇಸ್ರೊ ತಂಡ ಲ್ಯಾಂಡರ್‌ನಲ್ಲಿ ಇರಿಸಲಾದ ಕ್ಯಾಮರಾದಿಂದ ತೆಗೆದ ಚಂದ್ರನ ಮೇಲ್ಮೈ ಚಿತ್ರ ಹಾಗೂ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದೆ. 

ಚಿತ್ರಗಳಲ್ಲಿ ಚಂದ್ರನ ಮೇಲ್ಮೈ ಮೇಲೆ ಇರುವ ಕುಳಿಗಳ ಗುರುತುಗಳನ್ನು ಕಾಣಬಹುದಾಗಿದೆ

ಈ ಪೋಟೊಗಳು ಆಗಸ್ಟ್‌ 15 ರಂದು ಸೆರೆಯಾಗಿದ್ದು ಹಾಗೂ ವಿಡಿಯೊಗಳು ಲ್ಯಾಂಡರ್‌ ಬೇರ್ಪಟ್ಟ ಬಳಿಕ ಅಂದರೆ ಆಗಸ್ಟ್‌ 17ರಂದು ಸೆರೆಯಾದವು ಎಂದು ಇಸ್ರೊ ಹೇಳಿದೆ.

ಲ್ಯಾಂಡರ್‌ (ವಿಕ್ರಮ್‌) ಮತ್ತು ರೋವರ್‌ (ಪ್ರಗ್ಯಾನ್‌) ಶುಕ್ರವಾರ ಚಂದ್ರನ ಮೇಲ್ಮೈಗೆ ಇನ್ನಷ್ಟು ಹತ್ತಿರವಾಗಲಿದ್ದು, ಆಗಸ್ಟ್‌ 23 ರಂದು ಚಂದ್ರನ ದಕ್ಷಿಣ ದ್ರುವದಲ್ಲಿ ಲ್ಯಾಂಡ್‌ ಆಗುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT